ಪುಂಜಾಲಕಟ್ಟೆಯಲ್ಲಿ ಬೆಳ್ತಂಗಡಿಯ ಯುವಕನ ಮೇಲೆ ಗುಂಪು ದಾಳಿ | ಕೊಲೆ ಯತ್ನ

Share the Article

ಬಂಟ್ವಾಳ : ಪುಂಜಾಲಕಟ್ಟೆಯ ಗೆಳೆಯನೊಬ್ಬರ ಮನೆಗೆ ಹೋಗಿತ್ತಿದ್ದಾಗ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪೇರಡೆ ಎಂಬಲ್ಲಿನ ಕಿರಣ್ ಕುಮಾರ್ ಎಂಬವರಿಗೆ ಗುಂಪೊಂದು ಹಲ್ಲೆ ನಡೆಸಿ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ.

ಕಿರಣ್ ಕುಮಾರ್ ಎಂಬವರು ತನ್ನ ಬೈಕಲ್ಲಿ ಬಂಟ್ವಾಳದ ಕುಕ್ಕಳ ಗ್ರಾಮದ ಮಂಜಲಪಲ್ಕೆ ಎಂಬಲ್ಲಿರುವ ತನ್ನ ಗೆಳೆಯ ನಿತೀನ್ ಎಂಬವರ ಮನೆಗೆ ಹೋಗುತ್ತಿರುವಾಗ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಪೇಟೆಗೆ ತಲುಪಿದಾಗ ಸುಮಾರು 8-10 ಮಂದಿ ಅಪರಿಚಿತರು ಅಕ್ರಮಕೂಟ ಸೇರಿಕೊಂಡು ಕಿರಣ್ ಕುಮಾರ್ ಅವರ ಬೈಕನ್ನು ಅಡ್ಡಕಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಕೈಯಿಂದ ಹಲ್ಲೆ ನಡೆಸಿ ಬೈಕನ್ನು ದೂಡಿ ಹಾಕಿ ಕಿರಣ್ ಕುಮಾರ್ ಅನ್ನು ಕೆಳಗೆ ಬೀಳಿಸಿದ್ದಲ್ಲದೆ ಅವರ ಪೈಕಿ ಒಬ್ಬಾತನು ಅವರ ತಲೆಗೆ ಕಲ್ಲಿನಿಂದ ಹೊಡೆದು ಕೊಲೆಯತ್ನ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.

Leave A Reply