ಲ್ಯಾಪ್ಸ್ ಆದ ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್ | ಶುರುವಾಗಲಿದೆ ರದ್ದಾದ ಪಾಲಿಸಿ ನವೀಕರಣ ಅಭಿಯಾನ

ಇದೀಗ ಎಲ್‌ಐಸಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು,ಭಾರತೀಯ ಜೀವ ವಿಮಾ ನಿಗಮದಿಂದ ರದ್ದಾದ ಪಾಲಿಸಿ ನವೀಕರಣ ಅಭಿಯಾನ ಕೈಗೊಳ್ಳಲಾಗಿದೆ.

ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ರೂಪಿಸಿದೆ.ರದ್ದಾದ ವೈಯಕ್ತಿಕ ಪ್ಲಾನ್ ಗಳಿಗೆ ವಿಶೇಷ ನವೀಕರಣ ಅಭಿಯಾನ ಅನ್ವಯವಾಗಲಿದ್ದು, ಅಕ್ಟೋಬರ್ 22ರ ವರೆಗೆ ನಡೆಯಲಿದೆ ಎಂದು ಹೇಳಲಾಗಿದೆ.

ಬಹುತೇಕರು ಜೀವವಿಮೆ ಮಾಡಿಸಿದ್ದರೂ,ಅನೇಕ ಕಾರಣಗಳಿಂದ ಕೆಲವೊಮ್ಮೆ ಸಕಾಲಕ್ಕೆ ಪ್ರೀಮಿಯಂ ಪಾವತಿಸಲು ಆಗಿರುವುದಿಲ್ಲ.ಅಂತಹ ಪಾಲಿಸಿಗಳು ಲ್ಯಾಪ್ಸ್ ಆಗಿರುತ್ತವೆ.ಈ ಪಾಲಿಸಿಗಳ ನವೀಕರಣಕ್ಕೆ ಎಲ್‌ಐಸಿ ಮುಂದಾಗಿದೆ.

Ad Widget
Ad Widget

Ad Widget

Ad Widget

ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ತಗಲುವ ವಿಳಂಬ ಶುಲ್ಕಕ್ಕೆ ರಿಯಾಯಿತಿಯನ್ನು ಸಹ ಎಲ್‌ಐಸಿ ಪ್ರಕಟಿಸಿದ್ದು, ಆದರೆ ವೈದ್ಯಕೀಯ ವಿಮೆಗೆ ರಿಯಾಯಿತಿ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಎಲ್‌ಐಸಿ ಗ್ರಾಹಕರು ನಿರ್ದಿಷ್ಟಪಡಿಸಿದ ಆರೋಗ್ಯ, ಕಿರು ವಿಮೆ ಯೋಜನೆ ಮೊದಲಾದ ಅರ್ಹ ಯೋಜನೆಗಳ ಪಾಲಿಸಿಯನ್ನು ಷರತ್ತಿಗೆ ಒಳಪಟ್ಟು ಮೊದಲ ಬಾರಿಗೆ ಪಾವತಿಸಿದ ಪ್ರೀಮಿಯಂ ದಿನಾಂಕದಿಂದ ಐದು ವರ್ಷದ ಒಳಗೆ ನವೀಕರಿಸಬಹುದಾಗಿದೆ.

ಒಟ್ಟು ಪ್ರೀಮಿಯಂ ಪರಿಗಣಿಸಿ ವಿಳಂಬ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಲ್ಯಾಪ್ಸ್ ಆದ ಪಾಲಿಸಿ ಹೊಂದಿರುವ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯುವಂತೆ ಎಲ್‌ಐಸಿ ಕೋರಿದೆ.

Leave a Reply

error: Content is protected !!
Scroll to Top
%d bloggers like this: