ಕುಂಡಡ್ಕ : ರಕ್ಷಾ ಬಂಧನ ಆಚರಣೆ
ರಕ್ಷಾಬಂಧನದ ಮಹತ್ವ ಮಕ್ಕಳಲ್ಲಿ ಮೂಡಿಸುವುದು ಶ್ಲಾಘನೀಯ : ಕುಂಬ್ರ ದಯಾಕರ ಆಳ್ವ
ಕುಂಡಡ್ಕ : ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವು ರವಿವಾರ ಕುಂಡಡ್ಕ ದಲಿತ ಕಾಲನಿಯ ನಿವಾಸಿ ಶೇಷಪ್ಪ ಅವರ ನಿವಾಸದಲ್ಲಿ ನಡೆಯಿತು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಕ್ಕಳಿಗೆ ರಾಖಿ ಕಟ್ಟುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ರಕ್ಷಾ ಬಂಧನ ಸಹೋದರತೆ ಸಾರುವ ಹಬ್ಬವಾಗಿದ್ದು ಇದಕ್ಕೆ ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಎಳೆಯ ಮಕ್ಕಳಲ್ಲಿ ರಾಖಿಯ ಮಹತ್ವ ಸಾರುವ ಮೂಲಕ ಅವರಿಗೆ ಸಹೋದರತೆ ಸಂಬಂಧ ಸಾರುವ ಬಗ್ಗೆ ಅರಿವು ಮೂಡಿಸಲು ಮಕ್ಕಳ ಸಮ್ಮುಖದಲ್ಲಿಯೇ ರಕ್ಷಾ ಬಂಧನ ಆಚರಿಸಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪರಿಸರದ 20 ಕ್ಕೂ ಅಧಿಕ ಮಕ್ಕಳು ಪರಸ್ಪರ ರಾಖಿ ಕಟ್ಟಿ ಶುಭಾಷಯ ವಿನಿಮಯ ಮಾಡಿಕೊಂಡರು. ಸಿಹಿ ಹಂಚಿ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ನೇಸರ ಯುವಕ ಮಂಡಲದ ಮಹೇಶ್ ಕುಂಡಡ್ಕ, ರಮೇಶ್ ಕುಂಡಡ್ಕ, ಪ್ರಸಾದ್ ಕೆ, ಶೇಷಪ್ಪ ಉಪಸ್ಥಿತರಿದ್ದರು.