ಭೋಜ್ ಪುರಿ ನಟಿಯ ಖಾಸಗಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ |ಒಬ್ಬರ ಬೆನ್ನಲ್ಲೇ ಮತ್ತೊಬ್ಬರ ವೀಡಿಯೋ ವೈರಲ್ ಆಗಲು ಕಾರಣವೇನು?

ಭೋಜ್‌ಪುರಿ ನಟಿ ತ್ರಿಷಾ ಕರ್ ಮಧು ಎಂಎಂಎಸ್ ವೀಡಿಯೋ ಲೀಕ್ ಆದ ಬೆನ್ನಲ್ಲೇ ಮತ್ತೊಬ್ಬ ಭೋಜ್‌ಪುರಿ ನಟಿಯ ಖಾಸಗಿ ವೀಡಿಯೋ ಕೂಡ ಜಾಲತಾಣದಲ್ಲಿ ವೈರಲ್ ಆಗಿದೆ.

 

ಹೌದು, ನಟಿ ಪ್ರಿಯಾಂಕಾ ಪಂಡಿತ್ ವೀಡಿಯೋ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇನ್ನು ಭೋಜ್‌ಪುರಿ ಸಿನಿಮಾ ಇಂಡಸ್ಟ್ರಿ ಈ ರೀತಿಯ ಕೆಟ್ಟ ಕಾರಣದಿಂದಾಗಿ ದಿನದಿಂದ ದಿನಕ್ಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇತ್ತೀಚೆಗಷ್ಟೇ ನಟಿ ತ್ರಿಷಾ ಕರ್ ಮಧು ಖಾಸಗಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೀಗ ಮತ್ತೊಬ್ಬ ನಟಿ ಪ್ರಿಯಾಂಕ ಪಂಡಿತ್ ವೀಡಿಯೋ ಕೂಡ ಟ್ರೋಲಿಗರ ಆಹಾರವಾಗಿದೆ.

ಸದ್ಯ ವೈರಲ್ ಆಗಿರುವ ಪ್ರಿಯಾಂಕಾ ವೀಡಿಯೋ ಹಳೆಯದ್ದು ಎನ್ನಲಾಗಿದ್ದು, ತ್ರಿಷಾ ವೀಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಿಯಾಂಕಾ ವೀಡಿಯೋ ಕೂಡ ಮತ್ತೆ ವೈರಲ್ ಆಗಿದೆ. ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿರುವ ನಟಿ, ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಈ ವೀಡಿಯೋವನ್ನು ಪ್ರಕಟಿಸಲಾಗಿದೆ. ಅಲ್ಲದೆ, ಆ ವೀಡಿಯೋದಲ್ಲಿ ಇರುವುದು ನಾನಲ್ಲ. ದುರುದ್ದೇಶದಿಂದಲೇ ವೀಡಿಯೋವನ್ನು ಎಡಿಟ್ ಮಾಡಿ ಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ನಟಿ ಪ್ರಿಯಾಂಕಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಎಂಎಂಎಸ್ ಲಿಂಕ್‌ನ ಮೂಲವನ್ನು ಹುಡುಕುತ್ತಿದ್ದಾರೆ. ಅಲ್ಲದೆ, ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋಗಳನ್ನು ತೆಗೆದು ಹಾಕುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ನಟಿ ತ್ರಿಷಾ ಕರ್ ಮಧು ಅವರ ವೀಡಿಯೋ ಲೀಕ್ ಆಗಿತ್ತು. ಬಾಯ್‌ಫ್ರೆಂಡ್ ಜತೆ ಏಕಾಂತದಲ್ಲಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಧು, ದೇವರು ಎಲ್ಲವನ್ನು ನೋಡುತ್ತಿದ್ದಾನೆ. ನನ್ನ ಹೆಸರನ್ನು ಕೆಡಿಸಲು ಉದ್ದೇಶಪೂರ್ವಕವಾಗಿಯೇ ಕೆಲವು ಮಂದಿ ವೀಡಿಯೋವನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ್ದಾರೆ. ಇಂತಹ ಕೀಳುಮಟ್ಟಕ್ಕೆ ಇಳಿಯುತ್ತಾರೆಂದು ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇನ್ನು ಪ್ರಿಯಾಂಕಾ ಸಿನಿಮಾ ವಿಚಾರಕ್ಕೆ ಬರುವುದಾದರೆ, 2013ರಲ್ಲಿ ತೆರೆಕಂಡ ‘ಜೀನಾ ತೇರಿ ಗಾಳಿ ಮೈನ್’ ಚಿತ್ರ ಮೂಲಕ ಪ್ರಿಯಾಂಕ ಭೋಜ್‌ಪುರಿ ಸಿನಿಮಾ ರಂಗವನ್ನು ಪ್ರವೇಶಿಸಿದರು. ಪವನ್ ಪುತ್ರ, ಇಚ್ಛಾಧಾತಿ, ಅವರ ಬಲಮ್ ಕರಮ್ ಯುಗ್ ಮತ್ತು ತೊಡ್ ಡೆ ದುಸ್ಮನ್ ಕಿ ನಲಿ ರಾಮ್ ಔರ್ ಅಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಪ್ರಿಯಾಂಕಾ ಅಭಿನಯಿಸಿದ್ದಾರೆ.

Leave A Reply

Your email address will not be published.