ಅಫ್ಘಾನಿಸ್ತಾನವೇ ಆಗಲಿ, ಭಾರತವೇ ಆಗಲಿ, ಮುಸ್ಲಿಂಗೆ ದೊಡ್ಡ ಶತ್ರು ಮುಸ್ಲಿಂ!! | ಎಲ್ಲಾ ವಿಚಾರದಲ್ಲೂ ಧ್ವನಿ ಎತ್ತುವ ಎಸ್.ಡಿ.ಪಿ.ಐ ಸಹಿತ ಮತೀಯ ಸಂಘಟನೆಗಳು ಉಗ್ರರಿಗೆ ಹೆದರಿ ಕೂತಿದ್ದಾರೆಯೇ?
ಮುಸ್ಲಿಮರಿಗೆ ಮುಸ್ಲಿಮರೇ ವಿರೋಧಿಗಳಾಗಿದ್ದಾರೆಯೇ?ತಮ್ಮವರಿಗಾಗಿ ಸದಾ ಹೋರಾಟ ನಡೆಸುತ್ತಿರುವ ಮುಸ್ಲಿಂ ಲೀಗ್, ಮುಸ್ಲಿಂ ಪಡೆ, ಮುಸ್ಲಿಂ ಪಕ್ಷ ಭಾರತದ ನೆಲದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುತ್ತವೆ.ಸಿಎ ಎ ವಿರುದ್ಧ ಗಲ್ಲಿ ಗಲ್ಲಿಗಳಲ್ಲಿ ಪ್ರತಿಭಟನೆಯ ಕಿಚ್ಚು ಹಬ್ಬಿಸಿ, ಬೆಂಕಿಯಂತಹ ಭಾಷಣ ಬಿಗಿವ ಕೆಲ ಮುಸ್ಲಿಂ ಲೀಡರ್ಸ್ ಸದ್ಯ ಆ ಒಂದು ವಿಚಾರದಲ್ಲಿ ತಮಗೇನೂ ಅರಿವಿಲ್ಲದಂತೆ ಬಾಯಿ ಮುಚ್ಚಿ ಕುಳಿತಿದ್ದಾರೆ.
ಹೌದು,ತಾಲಿಬಾನ್ ಕೈಯ್ಯೊಳಗೆ ಅಫ್ಘಾನಿಸ್ತಾನ ಬಂಧಿಯಾದಾಗಿನಿಂದ ಅಲ್ಲಿ ನಡೆಯುತ್ತಿರುವ ಹಿಂಸೆಗಳ ಇಂಚಿಂಚು ಚಿತ್ರಣ ಎಲ್ಲೆಡೆ ಹರಿದಾಡುತ್ತಿದೆ. ಇದರ ಮಧ್ಯೆ ವಿಶ್ವದ ದೊಡ್ಡಣ್ಣ ಅಮೇರಿಕದ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ಬುಗಿಲೆದ್ದಿದ್ದು, ಪ್ರತಿಭಟನೆಯ ಬಿಸಿ ಕೂಡಾ ತಟ್ಟಿದೆ. ಇದೆಲ್ಲದರ ಮಧ್ಯೆ ತಮ್ಮವರಿಗಾಗಿ ಸದಾ ಹೋರಾಡುವ ದೇಶದ ಮುಸ್ಲಿಮರು ಬಾಯಿಗೆ ಬೀಗ ಹಾಕಿ ಕುಳಿತಿರುವುದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯ ಸೇಡನ್ನು ತೀರಿಸಲು ದಾಳಿ ನಡೆಸಿ, ತನ್ನ ಸೇನೆಯನ್ನು ಅಲ್ಲೇ ಇರಿಸಿಕೊಂಡಿದ್ದ ಅಮೇರಿಕ ಸದ್ಯ ಯಾವುದೇ ಸೂಚನೆಗಳಿಲ್ಲದೇ ಹಿಂಪಡೆದು ದೊಡ್ಡ ಮಟ್ಟದಲ್ಲಿ ಟೀಕೆಗೆ ಒಳಗಾಗಿದೆ.
ಕುರಿಯನ್ನು ಬಲಿ ಕೊಟ್ಟ ರೀತಿಯಲ್ಲಿ ಅಮೇರಿಕ ಉಗ್ರರಿಗೆ ಅಫ್ಘಾನಿಸ್ತಾನವನ್ನು ಬಲಿ ಕೊಟ್ಟಿದೆ ಎಂದೆಲ್ಲಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದಾದರೆ, ಅಮೇರಿಕವು ಅಂತಹ ನೀಚ ಕೃತ್ಯಕ್ಕೂ ಇಳಿದಿದೆಯೇ? ಅಮೇರಿಕಾ ತಾಲಿಬಾನ್ ಪರವಾಗಿದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಕಾಡುವುದು ಸಹಜ. ಇದೇ ರೀತಿಯಲ್ಲಿ ಮುಸ್ಲಿಮರು ನಿಜವಾಗಿಯೂ ಪ್ರತಿಭಟಿಸುವವರಾಗಿದ್ದರೆ,
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸೆಯ ಬಗೆಗೆ ಯಾಕೆ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆ ಕೂಡಾ ಕಾಡುತ್ತಿದೆ.
ಭಯಂಕರವಾದ, ವಿನಾಶದಂಚಿಗೆ ತಳ್ಳುವಂತಹ ಅಸ್ತ್ರಗಳ ಅಭಿವೃದ್ಧಿಗೆ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಬೆಂಬಲ ಸೂಚಿಸಿದನೆಂಬ ಕಾರಣಕ್ಕೆ 2003 ರಲ್ಲಿ ಅಮೇರಿಕಾ ಅಧ್ಯಕ್ಷ ಡಬ್ಲ್ಯು ಬುಷ್ ಇರಾಕ್ ಮೇಲೆಯೇ ಯುದ್ಧ ಸಾರಿ,ಸುಮಾರು 8 ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಇರಾಕ್ ಸಂಪೂರ್ಣ ಜರ್ಜರಿತವಾದವು. ಇದರ ಪರಿಣಾಮವಾಗಿಯೇ ಇರಾಕ್ ಇಂದಿಗೂ ತಲೆ ಎತ್ತದಂತಾಗಿರುವುದು ಅಮೇರಿಕಾದ ನರಿ ಬುದ್ಧಿಯ ನೈಜ ಉದಾಹರಣೆ.
ಆ ಬಳಿಕ 2011 ರಲ್ಲಿ ಅಮೇರಿಕಾದ ವಾಣಿಜ್ಯ ಕಟ್ಟಡಗಳ ಮೇಲೆ ಉಗ್ರರ ದಾಳಿ ನಡೆಯಿತು. ಈ ದಾಳಿಗೂ ಅಫ್ಘಾನಿಸ್ತಾನಕ್ಕೂ ನಂಟಿದೆ ಎಂದು ಅಮೇರಿಕ ಅಫ್ಘಾನಿಸ್ತಾನ ಳದ ವಿರುದ್ಧ ಸಮರ ಸಾರಿತು. ಸುಮಾರು 20 ವರ್ಷಗಳ ಕಾಲ ಅಲ್ಲೇ ಬೀಡು ಬಿಟ್ಟಿದ್ದ ಅಮೇರಿಕ ಪಡೆಯು, ಕೊಂಚ ಉಗ್ರರನ್ನು ಮಟ್ಟಹಾಕಿದನ್ನು ಬಿಟ್ಟರೆ ಪೂರ್ಣವಾಗಿ ಉಗ್ರರನ್ನು ದಮನಿಸಲು ಅಮೇರಿಕ ಸೈನ್ಯ ಕ್ಕೆ ಸಾಧ್ಯವಾಗಲಿಲ್ಲ. ಸದ್ಯ ಅಫ್ಘಾನಿಸ್ತಾನ ಉಗ್ರರ ಕೈವಶ ಆಗಿರುವುದು ಖಚಿತವಾಗುತ್ತಲೇ ತನ್ನ ಸೇನೆಯನ್ನು ಸದ್ದಿಲ್ಲದೇ ವಾಪಸ್ಸು ಕರೆಸಿಕೊಂಡಿದೆ.
ಸ್ವದೇಶದಲ್ಲಿರುವ ಕೆಲ ತಾಲಿಬಾನ್ ಅನುಯಾಯಿಗಳಾದ ಮುಸ್ಲಿಂ ಸಮುದಾಯದವರು ತಾಲಿಬಾನ್ ಪರ ವಹಿಸಿ ಬೊಗಳುತ್ತಿರುವುದು ವಿಪರ್ಯಾಸ. ಯಾವುದೋ ದೇಶದಲ್ಲಿ ನಡೆಯುವ ವಿಚಾರ ನಮಗ್ಯಾಕೆ ಎಂದ ಕೆಲ ಮತೀಯ ವಾದಿಗಳು, ಹಿಂದೆ ಪ್ಯಾಲಾಸ್ಥೈನ್ ನಲ್ಲಿ ಮುಸ್ಲಿಂ ರಿಗೆ ನಡೆದ ಅನ್ಯಾಯದ ವಿರುದ್ಧ ಬೆಂಗಳೂರಿನಲ್ಲಿ ಧ್ವನಿ ಎತ್ತಿದ್ದವರು ಈ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ. ಸದಾ ಉಗ್ರರ ಪರವಾಗಿರುವ ಈ ದೇಶದ ಮುಸ್ಲಿಮರು ಸದ್ದಾಂ ನನ್ನು ಗಲ್ಲಿಗೇರಿಸಿದ ದಿನವೂ ಪ್ರತಿಭಟಿಸಿದ್ದಾರೆ. ಆದರೆ ಇಂದು ತಮ್ಮವರನ್ನೇ ಉಗ್ರರು ಕೊಲ್ಲುತ್ತಿದ್ದಾರೆ ಎಂದಾಗ ಕಣ್ಣು-ಬಾಯಿ ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಲ್ಲಾ ವಿದ್ಯಾಮಾನಗಳನ್ನು ಒಟ್ಟಾಗಿ ತಾಳೆಮಾಡಿದಾಗ ಭಾರತದ ಮುಸ್ಲಿಮರು ತಾಲಿಬಾನ್ ಉಗ್ರ ಸಂಘಟನೆಯ ಪರವಾಗಿ ಇದ್ದಾರೆ ಎಂಬುವುದು ಖಚಿತವಾಗುತ್ತದೆ, ಆದರೆ ನಿಜಾಂಶ ತಿಳಿಯುವ ಸಮಯ ಸನ್ನಿಹಿತವಾಗುತ್ತಿದೆ. ದೇಶದೊಳಗೆ, ವಿದೇಶದಲ್ಲಿ ತಮ್ಮವರಿಗೆ ಅನ್ಯಾಯವಾದಾಗ ಕೆಂಡವಾಗಿದ್ದ ಮುಸ್ಲಿಮರಿಗೆ ಈಗ ತಮ್ಮವರು ಕಾಣಿಸುತ್ತಿಲ್ಲವೇ?ತಾಂಟ್ರೆ ಎಂದು ಘೋಷಣೆ ಕೂಗುವ ಎಸ್.ಡಿ.ಪಿ.ಐ ಸಹಿತ ಹಲವಾರು ಮುಸ್ಲಿಂ ಸಂಘಟನೆಗಳು ತಾಲಿಬಾನ್ ಉಗ್ರರಿಗೆ ಹೆದರಿ ಕೂತಿದ್ದಾರೆಯೇ? ಅಥವಾ ಇವರ ಧ್ವನಿಯನ್ನು ತಾಲಿಬಾನ್ ಉಗ್ರರು ಅಡಗಿಸಿದ್ದಾರೆಯೇ?.ಒಟ್ಟಾರೆಯಾಗಿ ಯಾವುದೇ ದೇಶದಲ್ಲಾಗಲಿ ಮುಸ್ಲಿಮರಿಗೆ ಮುಸ್ಲಿಮರೇ ವಿರೋಧಿಗಳಾ ಎಂಬ ಪ್ರಶ್ನೆಗೆ ಮುಸ್ಲಿಂ ನಾಯಕರು, ಮುಸ್ಲಿಂ ಸಂಘಟನೆಗಳು ಉತ್ತರಿಸಬೇಕಾಗಿದೆ.