ತಾಲಿಬಾನ್ ವರಿಷ್ಟ,ಮಾಸ್ಟರ್ ಮೈಂಡ್ ಹೈಬತುಲ್ಲಾ ಪಾಕ್ ಸೇನೆಯ ಹಿಡಿತದಲ್ಲಿ
ತಾಲಿಬಾನ್ ವರಿಷ್ಠ ನಾಯಕ ಹೈಬತುಲ್ಲಾ ಪಾಕಿಸ್ತಾನದ ಸೇನೆಯ ಹಿಡಿತದಲ್ಲಿರುವ ಸಾಧ್ಯತೆ ಹೆಚ್ಚಿದೆ ಎಂದು ವಿದೇಶಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ರಹಸ್ಯ ಬಂಧನದಲ್ಲಿರುವ ಹೈಬತುಲ್ಲಾನ ಕುರಿತು ವಿದೇಶಿ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನು ಪರಿಶೀಲಿಸುತ್ತಿರುವ ಭಾರತ ಸರ್ಕಾರ ಈ ಮಾಹಿತಿ ನೀಡಿದೆ.
ಕಳೆದ ಆರು ತಿಂಗಳಿನಿಂದ ತಾಲಿಬಾನ್ ಬಂಡುಕೋರ, ಭಯೋತ್ಪಾದಕ ಹೈಬತುಲ್ಲಾ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮೇನಲ್ಲಿ ನಡೆದ ಈದ್ ಉಲ್ ಫಿತರ್ ವೇಳೆ ಮಾತ್ರ ಹೈಬತುಲ್ಲಾ ಕೊನೆಯದಾಗಿ ಬಹಿರಂಗ ಹೇಳಿಕೆ ನೀಡಿರುವುದಾಗಿ ವರದಿ ಹೇಳಿದೆ.
ತಾಲಿಬಾನ್ ನಾಯಕ ಅಖರ್ ಮನ್ಸೂರ್ ನನ್ನು ಅಮೆರಿಕ ಡೋನ್ ದಾಳಿ ನಡೆಸಿ ಹತ್ಯೆಗೈದ ಬಳಿಕ 2016ರ ಮೇ ತಿಂಗಳಿನಲ್ಲಿ ಹೈಬತುಲ್ಲಾ ನನ್ನು ತಾಲಿಬಾನ್ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿತ್ತು.
ಹೈಬತುಲ್ಲಾ(50) ತಾಲಿಬಾನ್ ಬಂಡುಕೋರ ಎಂಬುದಕ್ಕಿಂತ ಹೆಚ್ಚಾಗಿ ಕಾನೂನು ತಜ್ಞ ಎಂದೇ ಗುರುತಿಸಿಕೊಂಡಿದ್ದಾರೆ. ಈತನನ್ನು ನಂಬಿಕಸ್ಥ ಕಮಾಂಡರ್ ಎಂದೂ ಕರೆಯಲಾಗುತ್ತದೆ.
ಲಷ್ಕರ್ ಎ ತೊಯ್ದಾ ಹಾಗೂ ಜೈಶ್ ಎ ಮೊಹಮ್ಮದ್ ನಂತಹ ಉಗ್ರಗಾಮಿ ಸಂಘಟನೆಗಳು ತಾಲಿಬಾನ್ ಜತೆ ಕೈಜೋಡಿಸುತ್ತಿರುವ ಕುರಿತು ಭಾರತಕ್ಕೆ ಮಾಹಿತಿ ಲಭ್ಯವಾಗಿದೆ ಎಂದು ವರದಿ ತಿಳಿಸಿದೆ.