ಸ್ವಾತಂತ್ರ್ಯ ದಿನದಂದೇ ನಡೆಯಿತು ರಾಷ್ಟ್ರಗೀತೆಗೆ ಅವಮಾನ | ಬಂಟ್ವಾಳ ಪುರಸಭೆಯ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಯಿಂದ ದೇಶ ದ್ರೋಹದ ಕೃತ್ಯ,ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊತ್ತವರು ಯಾರು?

Share the Article

ಸ್ವಾತಂತ್ರ್ಯ ದಿನದಂದು ನಡೆದ ಧ್ವಜಾರೋಹಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಂಟ್ವಾಳ ಪುರಸಭೆಯ ಸದಸ್ಯರೊಬ್ಬರು ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

https://youtube.com/shorts/I7jQgRDlRbc?feature=share

ಬಂಟ್ವಾಳ ಮುಸ್ಲಿಂ ಯಂಗ್ ಮೆನ್ ಅಸೋಸಿಯೇಷನ್ ಲೋರಟ್ಟೋ ಪದವು ಟಿಪ್ಪು ನಗರ ವತಿಯಿಂದ ನಡೆಸಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಈ ನಾಲಾಯಕ್ಕ್ ಸದಸ್ಯ, ರಾಷ್ಟ್ರ ಗೀತೆಯನ್ನು ತಪ್ಪು ತಪ್ಪು ಹೇಳಿ, ಅಲ್ಲಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದ್ದಾನೆ.ಮೊದಲಿಗೆ ಆತನೊಬ್ಬನೇ ರಾಷ್ಟ್ರಗೀತೆ ಹೇಳಿದ್ದು, ತಪ್ಪಾಗಿ ರಾಷ್ಟ್ರ ಗೀತೆಯನ್ನು ಹೇಳುತ್ತಿರುವಾಗ ನೆರೆದಿದ್ದ ಕೆಲವರು ನಗುತ್ತಿರುವ ದೃಶ್ಯ ಕೂಡಾ ಕಂಡುಬಂದಿದೆ.ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಗೆ ಅದರದ್ದೇ ಆದ ಘನತೆ, ಗೌರವವಿದ್ದು, ಇಂತಹ ಕೆಲ ಕಿಡಿಗೇಡಿಗಳಿಂದ ಅವಮಾನವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ಸದ್ಯ ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ರಾಷ್ಟ್ರ ಗೀತೆಗೆ ಅವಮಾನ ಮಾಡಿರುವವರ ವಿರುದ್ಧ ಸಂಬಂಧ ಪಟ್ಟವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುವುದನ್ನು ಕಾದುನೋಡಬೇಕಾಗಿದೆ.

Leave A Reply