ಪುತ್ತೂರು | ರಸ್ತೆ ದಾಟುತ್ತಿದ್ದ ಕಾಡುಹಂದಿ ಗೆ ಬೈಕ್ ಡಿಕ್ಕಿ, ಸವಾರನಿಗೆ ಗಾಯ | ಡಿಕ್ಕಿಯ ರಭಸಕ್ಕೆ ಎರಡು ಕಾಲು ಕಳೆದುಕೊಂಡ ಕಾಡುಹಂದಿ

Share the Article

ಪುತ್ತೂರು :ರಸ್ತೆಗೆ ಅಡ್ಡವಾಗಿ ಬಂದ ಕಾಡು ಹಂದಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಕಾಡು ಹಂದಿಗೆ ಗಾಯಗಳಾದ
ಘಟನೆ ಪುತ್ತೂರಿನ ಕುಂಬ್ರ ಪರ್ಪುಂಜ ವಿರಾಮದ ಮನೆಯ ಮುಂಭಾಗದ ರಸ್ತೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಈಶ್ವರಮಂಗಲ ನಿವಾಸಿಯಾದ ಅಭಿಷೇಕ್ ಮೇನಾಲ ಎಂಬುವವರು ಗಾಯಗೊಂಡ ವ್ಯಕ್ತಿ ಎಂದು ತಿಳಿದುಬಂದಿದ್ದು, ಗಾಯಾಳನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಘಟನೆಯಲ್ಲಿ ಹಂದಿಗೂ ಗಾಯಗಳಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಹಂದಿಯ ಹಿಂಭಾಗದ ಎರಡು
ಕಾಲುಗಳು ತುಂಡಾಗಿ ರಸ್ತೆ ಬದಿಯಲ್ಲಿ ಒದ್ದಾಡುತ್ತಿತ್ತು.

ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿದ್ದು, ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು,ಹಂದಿಗೂ ಚಿಕಿತ್ಸೆ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply