‘ರೋಹಿಂಗ್ಯಾ-ಬಾಂಗ್ಲಾದೇಶಿ ನುಸುಳುವಿಕೆ : ರಾಷ್ಟ್ರೀಯ ಭದ್ರತೆಗೆ ವಿಪತ್ತು’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದ !
ಅಮಾನವೀಯ ರೋಹಿಂಗ್ಯಾಗಳಿಗೆ ಮಾನವೀಯತೆಯ ದೃಷ್ಟಿಯಿಂದ ಭಾರತದಲ್ಲಿ ಉಳಿಯಲು ಅವಕಾಶ ನೀಡುವುದು ರಾಷ್ಟ್ರೀಯ ಹಿತಕ್ಕೆ ಅಪಾಯಕಾರಿ ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ಮ್ಯಾನ್ಮಾರ್‌ನಲ್ಲಿರುವ ರೋಹಿಂಗ್ಯಾ ಮುಸಲ್ಮಾನರನ್ನು ಒಂದು ದೊಡ್ಡ ಸಂಚಿನ ಅಡಿಯಲ್ಲಿ ಭಾರತದಲ್ಲಿ ಅಕ್ರಮವಾಗಿ ನುಸುಳಿಸಲಾಗಿದೆ. ಅವರು ಜಮ್ಮು-ಕಾಶ್ಮೀರ, ಅಸ್ಸಾಂ, ಪಂಜಾಬ್, ಉತ್ತರ ಭಾರತ, ಮೇವಾತ್ (ಹರಿಯಾಣಾ) ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕ್ಯಾನ್ಸರ್‌ನಂತೆ ಹರಡಿದ್ದಾರೆ. ಮೇವಾತ್‌ನಲ್ಲಿ ಹಿಂದೂಗಳ ಸ್ಥಳಗಳನ್ನು ಅತಿಕ್ರಮಿಸುವ ಮೂಲಕ ಅವರು ಹಿಂದೂ ಯುವತಿಯರ ಅಪಹರಣ, ಅತ್ಯಾಚಾರ, ಹಿಂದೂಗಳ ಹತ್ಯೆ, ದೇವಸ್ಥಾನಗಳ ಧ್ವಂಸ, ಮನೆಗಳ ಲೂಟಿ ಇತ್ಯಾದಿಗಳನ್ನು ಆರಂಭಿಸಿದ್ದಾರೆ.
ಇಂತಹ ಅಮಾನವೀಯ ಮತ್ತು ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ರೋಹಿಂಗ್ಯಾಗಳಿಗೆ ಮಾನವೀಯತೆಯ ದೃಷ್ಟಿಕೋನದಿಂದ ಭಾರತದಲ್ಲಿ ಉಳಿಯಲು ಅವಕಾಶ ನೀಡುವುದು ರಾಷ್ಟ್ರೀಯ ಹಿತಕ್ಕೆ ಅಪಾಯಕಾರಿಯಾಗಿದೆ ಎಂದು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಹೇಳಿದರು. ಅವರು ‘ಹಿಂದೂ ಜನಜಾಗೃತಿ ಸಮಿತಿ’ಯು ಆಯೋಜಿಸಿದ ‘ರೋಹಿಂಗ್ಯಾ-ಬಾಂಗ್ಲಾದೇಶಿ ನುಸುಳುವಿಕೆ : ರಾಷ್ಟ್ರೀಯ ಭದ್ರತೆಗೆ ವಿಪತ್ತು’ ಕುರಿತು ‘ಆನ್‌ಲೈನ್ ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.
ನ್ಯಾಯವಾದಿ ಜೈನ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರಶಾಂತ ಭೂಷಣ ಮತ್ತು ಕಾಲಿನ್ ಗೊನ್ಸಾಲ್ವಿಸ್ ಅವರಂತಹ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ರೋಹಿಂಗ್ಯಾಗಳಿಗಾಗಿ ಹೋರಾಡುತ್ತಿದ್ದಾರೆ, ಆದರೆ ‘ಜಕಾತ್ ಫೌಂಡೇಶನ್’ನಂತಹ ಮತಾಂಧ ಸಂಘಟನೆಗಳು ರೋಹಿಂಗ್ಯಾಗಳನ್ನು ದೇಶಾದ್ಯಂತ ನೆಲೆಸಲು ಕೆಲಸ ಮಾಡುತ್ತಿವೆ. ಇದರ ಬಗ್ಗೆ ದೇಶದಾದ್ಯಂತ ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಮಯದಲ್ಲಿ, ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ ಶ್ರೀ. ವಿನೋದ ಬನ್ಸಾಲ್ ಅವರು ಮಾತನಾಡುತ್ತಾ, ಮೊದಲು ನಿರಾಶ್ರಿತರೆಂದು ಆಶ್ರಯ ಪಡೆದ ನಂತರ, ಈ ಜನರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ದೇಶದಲ್ಲಿ ಪ್ರಾಬಲ್ಯವನ್ನು ಸೃಷ್ಟಿಸುತ್ತಾರೆ. ಈ ರೀತಿಯಾಗಿ, ಅವರು ಜಗತ್ತಿನ 56 ದೇಶಗಳನ್ನು ಇಸ್ಲಾಮಿಕ್ ಮಾಡಿದ್ದಾರೆ. ಮ್ಯಾನ್ಮಾರ್‌ನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಜಮ್ಮುವಿನಲ್ಲಿ ಸಾವಿರಾರು ರೋಹಿಂಗ್ಯಾಗಳನ್ನು ಏಕೆ ನೆಲೆಸಲಾಯಿತು ? ಇದರ ಹಿಂದೆ ಜಮ್ಮುವನ್ನು ಕಾಶ್ಮೀರದಂತೆ ಹಿಂದೂ ಮುಕ್ತವನ್ನಾಗಿ ಮಾಡುವ ಜಿಹಾದಿ ವಿಚಾರವಿತ್ತು. ರೋಹಿಂಗ್ಯಾಗಳ ವಸಾಹತುಗಳನ್ನು ಭಾರತೀಯ ಸೇನಾ ನೆಲೆಯ ಬಳಿ ಇರಿಸಲಾಗಿತ್ತು ಮತ್ತು ನಂತರ ಸೈನ್ಯ ನೆಲೆಯ ಮೇಲೆ ಬಾಂಬ್ ಸ್ಫೋಟಿಸಲಾಯಿತು.
೨೦೦೮ ರಲ್ಲಿ ದೆಹಲಿಯಲ್ಲಿ ನಿರಾಶ್ರಿತರ ಸ್ಥಾನವನ್ನು ಪಡೆಯಲು ಬಂದಿದ್ದ ೩ ಸಾವಿರ ರೋಹಿಂಗ್ಯಾ ಕೊನೆಗೆ ಎಲ್ಲಿ ಹೋದರು, ಅದು ತಿಳಿಯಲಿಲ್ಲ. ಆದ್ದರಿಂದ ಸರಕಾರದ ಮೇಲೆ ಅವಲಂಬಿಸಿರದೇ ಎಲ್ಲಾ ಹಿಂದೂಗಳು ಸ್ವಯಂ ಜಾಗೃತವಾಗಿ ಹಾಗೂ ಸಂಘಟಿತರಾಗಬೇಕು, ಆಗ ಮಾತ್ರ ನುಸುಳುವಿಕೆಯನ್ನು ತಡೆಯಬಹುದು.
ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ್ ಅವರು ಮಾತನಾಡುತ್ತಾ, ನುಸುಳುಕೋರರು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದ್ದರೂ, 2012 ರಲ್ಲಿ 40 ಸಾವಿರ ಇದ್ದ ರೋಹಿಂಗ್ಯಾಗಳ ಸಂಖ್ಯೆ ಈಗ ಕೆಲವು ಲಕ್ಷಗಳಷ್ಟು ಏರಿದೆ. ಭದ್ರತಾ ವ್ಯವಸ್ಥೆಗಳ ಮಾಹಿತಿಗನುಸಾರ, ಭಾರತದಲ್ಲಿ 6 ಕೋಟಿಗೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 11 ಸಾವಿರ ಅಫ್ಘಾನ್ ನುಸುಳುಕೋರರು ಕೂಡ ಬಂದಿದ್ದಾರೆ. ಅವರು ದೆಹಲಿಯಲ್ಲಿ ‘ಮಿನಿ ಕಾಬೂಲ್’ ಸ್ಥಾಪಿಸಿದ್ದಾರೆ. ದೆಹಲಿಯಲ್ಲಿ ಹಠಾತ್ ರೋಹಿಂಗ್ಯಾ ಗುಡಿಸಲುಗಳನ್ನು ಸುಟ್ಟ ನಂತರ, ‘ಆಪ್’ನ ನಾಯಕರು ಅಲ್ಲಿಗೆ ಭೇಟಿ ನೀಡಿದರು. ರೊಹಿಂಗ್ಯಾಗಳಿಗೆ ದೆಹಲಿ ಸರಕಾರವು ಆರ್ಥಿಕ ನೆರವು, ಹೊಸ ಮನೆಗಳು, ವಿದ್ಯುತ್, ನೀರು ಇತ್ಯಾದಿಗಳನ್ನು ಘೋಷಿಸಿದೆ. ಇದರರ್ಥ ಬಹುಸಂಖ್ಯಾತ ಹಿಂದೂಗಳು ತೆರಿಗೆಗಳನ್ನು ಪಾವತಿಸುತ್ತದೆ ಮತ್ತು ಸೌಲಭ್ಯಗಳನ್ನು ನುಸುಳುಖೋರರಿಗೆ ಒದಗಿಸುತ್ತಾರೆ, ಇದನ್ನು ಹಿಂದೂಗಳು ಎಂದಿಗೂ ಸಹಿಸುವುದಿಲ್ಲ. ನುಸುಳುಖೋರರನ್ನು ಮಾನವೀಯತೆಯ ದೃಷ್ಟಿಯಿಂದ ನೋಡಿದರೆ, ಹಿಂದೂಗಳು ‘ಮನುಷ್ಯ’ರಾಗಿ ಉಳಿಯುವುದಿಲ್ಲ ಎಂದು ಹೇಳಿದರು.
ಈ ಸಮಯದಲ್ಲಿ, ಅಸ್ಸಾಂನ ಹಿಂದೂ ಜನಜಾಗರಣ ಮಂಚ್‌ನ ಕಾನೂನು ಮುಖ್ಯಸ್ಥ ನ್ಯಾಯವಾದಿ ರಾಜೀವಕುಮಾರ್ ನಾಥ್ ಅವರು ಮಾತನಾಡುತ್ತಾ, ಅಸ್ಸಾಂನ ಸಾವಿರಾರು ಕಿಲೋ ಮೀಟರ ಗಡಿ ಮ್ಯಾನ್ಮಾರ್ ನೊಂದಿಗೆ ಹೊಂದಿದೆ. ಆದ್ದರಿಂದ, ಸ್ಥಳೀಯ ಮತಾಂಧರ ಸಹಾಯದಿಂದ ರೋಹಿಂಗ್ಯಾಗಳನ್ನು ವ್ಯವಸ್ಥಿತವಾಗಿ ಭಾರತದಲ್ಲಿ ನುಸುಳಿಸಲಾಗುತ್ತದೆ ಇದು ನೈಜ ಸ್ಥಿತಿಯಾಗಿದೆ ಎಂದು ಹೇಳಿದರು.
?ಶ್ರೀ. ರಮೇಶ ಶಿಂದೆ