ಆ.31 ರಿಂದ ದೂರದರ್ಶನ ಮರುಪ್ರಸಾರ ಕೇಂದ್ರಗಳ ಪ್ರಸಾರ ಸ್ಥಗಿತ

ದೂರದರ್ಶನ ಮರುಪ್ರಸಾರ ಕೇಂದ್ರಗಳ ಕೇಂದ್ರಗಳು ಆಗಸ್ಟ್‌ 31ರಿಂದ ಪ್ರಸಾರವನ್ನು ಸ್ಥಗಿತಗೊಳಿಸಲಿವೆ.

ಡಿಜಿಟಲೀಕರಣದಿಂದಾಗಿ ದೇಶಾದ್ಯಂತ 272 ದೂರದರ್ಶನ ಮರುಪ್ರಸಾರ ಕೇಂದ್ರ (ಲೋ ಪವರ್‌ ಟ್ರಾನ್ಸ್‌ಮಿಟರ್‌- ಎಲ್‌ಪಿಟಿ) ಗಳನ್ನು ಮುಚ್ಚುವ ಪ್ರಕ್ರಿಯೆ ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿದೆ.
ಕರ್ನಾಟಕದಲ್ಲಿ 28 ಮರುಪ್ರಸಾರ ಕೇಂದ್ರ ಗಳಿದ್ದು, ಅವುಗಳ ಪೈಕಿ 11 ಕೇಂದ್ರಗಳ ಕಾರ್ಯನಿರ್ವಹಣೆ ಈ ತಿಂಗಳೇ ಕೊನೆ.

ಒಂದೊಂದು ಕೇಂದ್ರ ದಲ್ಲಿ ತಲಾ 3-4 ಮಂದಿ ಸಿಬಂದಿ ಇದ್ದು, ಅವರನ್ನು ಹೈಪವರ್‌ ಟ್ರಾನ್ಸ್‌ ಮಿಟರ್‌ (ಎಚ್‌ಪಿಟಿ)ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಥವಾ ಆಕಾಶವಾಣಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಡಿಜಿಟಲೀಕರಣದ ಈ ಯುಗದಲ್ಲಿ ದೂರದರ್ಶನವು ಡಿಟಿಎಚ್‌ ಸೇವೆ ಯನ್ನು ಆರಂಭಿಸಿರುವ ಕಾರಣ ಹಾಗೂ ಹೈಪವರ್‌ ಟ್ರಾನ್ಸ್‌ಮಿಟರ್‌ಗಳು ಬಲು ದೂರದ ತನಕ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಮತ್ತು ಕೇಬಲ್‌ ನೆಟ್‌ವರ್ಕ್‌ ಕೂಡ ಇರುವುದರಿಂದ

ಮರು ಪ್ರಸಾರ ಕೇಂದ್ರಗಳು ಪ್ರಸ್ತುತತೆ ಯನ್ನು ಕಳೆದುಕೊಂಡಿವೆ. (ರಾಜ್ಯ ದಲ್ಲಿ ಮಂಗಳೂರು, ಬೆಂಗಳೂರು ಸಹಿತ 8 ಹೈಪವರ್‌ ಟ್ರಾನ್ಸ್‌ಮಿಟರ್‌ಗಳಿವೆ). ಆ್ಯಂಟೆನಾ ಹಾಕಿ ಟಿ.ವಿ. ನೋಡು ವವರು ಈಗ ಕಡಿಮೆ. ಹಾಗಾಗಿ ತನ್ನ ಸಾಂಪ್ರದಾಯಿಕ ಅನಲಾಗ್‌ ಮರುಪ್ರಸಾರ ಕೇಂದ್ರ ಗಳನ್ನು ಹಂತ ಹಂತವಾಗಿ ಮುಚ್ಚಲು ಪ್ರಸಾರ ಭಾರತಿ ನಿರ್ಧರಿಸಿದೆ.

ಕೊಪ್ಪ, ಮೂಡಿಗೆರೆ, ಪಾವಗಡ, ಹತ್ತಿಹಾಳ, ಹುನಗುಂದ, ಸಂಡೂರು, ಬಸವ ಕಲ್ಯಾಣ, ಹರಪನ ಹಳ್ಳಿ, ಹಿರಿಯೂರು, ತಾಳಿಕೋಟೆ, ಮುಧೋಳದಲ್ಲಿರುವ ಕೇಂದ್ರಗಳು ಸ್ಥಗಿತಗೊಳ್ಳಲಿದೆ.

Leave A Reply

Your email address will not be published.