ಇಂದು ಸಂಜೆ ಸಲಹಾ ಸಮಿತಿಯ ಸಭೆ ಕರೆದ ಮುಖ್ಯಮಂತ್ರಿ ಬೊಮ್ಮಾಯಿ| 16 ರ ನಂತರ ದ.ಕ, ಉಡುಪಿ ಸಹಿತ ಗಡಿನಾಡ ಜಿಲ್ಲೆಗಳಲ್ಲಿ ಲಾಕ್ ಡೌನ್ ಪಕ್ಕಾ !?
ಕೇರಳ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಹಾಮಾರಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸರ್ಕಾರ ಈಗಾಗಲೇ ಗಡಿನಾಡಿನ ಸುಮಾರು 8 ಜಿಲ್ಲೆಗಳಲ್ಲಿ ವಾರಂತ್ಯದ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ವಿಧಿಸಿದ್ದು, ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲು ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಂತ್ರಿಕ ಸಲಹಾ ಸಮಿತಿಯ ಸಭೆ ಕರೆದಿದ್ದು ಗಡಿನಾಡಿನ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಕೇರಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರ್, ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್ ಆಂಧ್ರ ಗಡಿ ಜಿಲ್ಲೆಗಳಾದ ಕಲಬುರ್ಗಿ, ಬಿಜಾಪುರ ಮುಂತಾದ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಗೊಳಿಸುವುದು ಪಕ್ಕಾ ಆಗಿದೆ.
ಮೂರನೇ ಅಲೆಯ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದು, ಅಗತ್ಯ ಬಿದ್ದರೆ ಬೆಂಗಳೂರು ಗ್ರಾಮಾಂತರ ಸಹಿತ ನಗರಗಳಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ.ನಿನ್ನೆಯ ಕೋವಿಡ್ ವರದಿಯ ಪ್ರಕಾರ ದಕ್ಷಿಣ ಕನ್ನಡ ಸಹಿತ ಉಡುಪಿ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚು ಕಂಡುಬಂದಿದ್ದು ಈಗಾಗಲೇ ಕಠಿಣ ಕ್ರಮ ಕೈಗೊಂಡಿದ್ದರೂ, ಗಡಿ ಪ್ರದೇಶಗಳಿಂದ ಬರುವ ವಾಹನ, ಪ್ರವಾಸಿಗರನ್ನು ತಡೆಗಟ್ಟಿದ್ದರೂ ಪ್ರಕರಣದ ದರ ಹೆಚ್ಚುತ್ತಲೇ ಇದೆ.
ಜಿಲ್ಲೆಯಲ್ಲಿ ಈಗಾಗಲೇ ಸಮಾರಂಭ, ಹಬ್ಬ ಹರಿದಿನಗಳು ಸಾಲು ಸಾಲಾಗಿ ಬರುತ್ತಿದ್ದರೂ ಜಿಲ್ಲಾಡಳಿತ ಸಲಹೆ ಸೂಚನೆಗಳನ್ನು ನೀಡಿ ಆಚರಣೆಗೆ ಅವಕಾಶ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಶಾಲಾ ಕಾಲೇಜು ಆರಂಭಕ್ಕೂ ದಿನ ನಿಗದಿ ಮಾಡಿರುವುದು ಜನರನ್ನು ಹೆಚ್ಚು ಭಯಭೀತರನ್ನಾಗಿಸಿದೆ.
ಎಲ್ಲಾ ಉಹಾಪೋಹಾಗಳಿಗೂ ಇಂದು ಬ್ರೇಕ್ ಬೀಳಲಿದ್ದು, ಎಲ್ಲರ ಚಿತ್ತ ಮುಖ್ಯ ಮಂತ್ರಿಯ ಸಲಹಾ ಸಮಿತಿಯ ನಿರ್ಧಾರದತ್ತ ಇದ್ದು, ಒಂದುವೇಳೆ ಲಾಕ್ ಡೌನ್ ಮಾಡದೇ ಮೈಮರೆತರೆ ಅರೋಗ್ಯ ಇಲಾಖೆಯು ಒತ್ತಡಕ್ಕೆ ಸಿಲುಕಲಿದ್ದು,ಸೆಕೆಂಡ್ ಗಳಲ್ಲಿ ವ್ಯಾಪಿಸುವ ಮಹಾಮಾರಿಯ ನಿಯಂತ್ರಣ ಕಷ್ಟಕರವಾಗಿದೆ. ಇಂದಿನ ಸಭೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಎಲ್ಲಾ ಸಾಧ್ಯತೆಗಳಿದ್ದು, ಸರ್ಕಾರದ ನಿಯಮವನ್ನು ಕಾದುನೋಡಬೇಕಾಗಿದೆ.