ದೆಹಲಿಯಲ್ಲಿ ಕಪಿಲ್ ಸಿಬಲ್ ನೇತೃತ್ವದ ಕಾಂಗ್ರೆಸ್ ನಾಯಕರ ಸಭೆ | ಪಕ್ಷ ಬಲವರ್ಧನೆಗೆ ಗಾಂಧಿ ಕುಟುಂಬಿಕರಿಂದ ಪಕ್ಷದ ಹಿಡಿತ ಮುಕ್ತಿಗೆ ಚರ್ಚೆ

ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ದೆಹಲಿ ನಿವಾಸದಲ್ಲಿ ಅವರ ಹುಟ್ಟು ಹಬ್ಬದ ಅಂಗವಾಗಿ ಪಕ್ಷದ ನಾಯಕರಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಔತಣಕೂಟದಲ್ಲಿ ಹಲವಾರು ರಾಜಕೀಯ ವಿಚಾರಗಳ ಬಗ್ಗೆ ಚರ್ಚೆಯೂ ನಡೆಯಿತು.ಮುಖ್ಯವಾಗಿ ಪಕ್ಷ ಬಲವರ್ಧನೆಗೆ ಗಾಂಧಿ ಕುಟುಂಬಿಕರಿಂದ ಪಕ್ಷದ ಹಿಡಿತ ಮುಕ್ತಿಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

 

ಈ ಸಭೆಯು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ತಂತ್ರಗಾರಿಕೆಯ ಕೇಂದ್ರವಾಯಿತು. ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಪಡಿಸಯವ ಬಗ್ಗೆಯೂ ಚರ್ಚೆ ಮಾಡಲಾಗಿದೆ.

ಗಾಂಧಿ ಕುಟುಂಬಿಕರನ್ನು ನಾಯಕತ್ವದ ಹಿಡಿತದಿಂದ ಮುಕ್ತಗೊಳಿಸಿದರೆ ಮಾತ್ರ ಇದು ಸಾಧ್ಯ ಎಂದು ಕೆಲವು ನಾಯಕರು ಅಭಿಪ್ರಾಯ ಪಟ್ಟಿದ್ದು, ಈ ಸಭೆಯಲ್ಲಿ ಗಾಂಧಿ ಕುಟುಂಬಿಕರು ಭಾಗವಹಿಸಿರಲಿಲ್ಲ.

ಕಳೆದ ವರ್ಷ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪತ್ರವೊಂದನ್ನು ಬರೆದ ಸಿಬಲ್ ಅವರು, 2014 ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಪಕ್ಷದ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸಕ್ರಿಯ, ಗೋಚರ ನಾಯಕತ್ವ ಮತ್ತು ಆಂತರಿಕ ಚುನಾವಣೆಗಳು ಸೇರಿದಂತೆ ಹಲವಾರು ವಿಚಾರಗಳ ಕುರಿತು ಪತ್ರ ಬರೆಯಲಾಗಿತ್ತು.

Leave A Reply

Your email address will not be published.