ಒಲಂಪಿಕ್ಸ್ ನ ಕುಸ್ತಿ ಪಂದ್ಯಾಟದಲ್ಲಿ ಕಂಚು ಗೆದ್ದ ‘ಭಜರಂಗ್’ | ಭಾರತಕ್ಕೆ ಆರನೇ ಪದಕ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪೂನಿಯ ದೇಶಕ್ಕೆ ಕಂಚಿನ ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ.

 

ಇಂದು ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಕಜಾಕಿಸ್ತಾನದ ದೌಲೆಟ್ ನಿಯಾಜ್‌ಕಾವ್ ವಿರುದ್ಧ 8-0 ಸ್ಕೋರ್ ಪಡೆದ ಪೂನಿಯ, ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 6 ಪದಕಗಳು ದೊರೆತಂತಾಗಿದೆ.

ಸೆಮಿಫೈನಲ್ಸ್‌ನಲ್ಲಿ ಇರಾನಿನ ಹಾಜಿ ಅಲಿಯೇವ್ ವಿರುದ್ಧ ಸೋತಿದ್ದ ಬಜರಂಗ್ ಪೂನಿಯಾ, ಚಿನ್ನಕ್ಕಾಗಿ ಕಾದಾಡುವ ಅವಕಾಶ ಕಳೆದುಕೊಂಡಿದ್ದರು. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಆರನೇ ಪದಕವನ್ನು ಗೆದ್ದಿದ್ದಾರೆ.

Leave A Reply

Your email address will not be published.