ಕಾಮ ಕಳಂಕಕ್ಕೆ ಒಳಗಾದ ಮೈಸೂರು ವಿಶ್ವವಿದ್ಯಾಲಯ | ಪ್ರೊಫೆಸರ್ ಜತೆ ಮಲಗಿದ್ರೆ ಪಿಎಚ್‌ಡಿ ಈಸ್ ಸೋ ಈಸಿ !?

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಕಾಮಕಾಂಡದ ಕಳಂಕಕ್ಕೆ ಒಳಗಾಗಿದ್ದು, ಸಂಶೋಧನಾ ವಿದ್ಯಾರ್ಥಿನಿಯನ್ನು ಮನೆಗೇ ಕರೆಸಿಕೊಂಡಿದ್ದ ಪ್ರೊಫೆಸರ್, ಪತ್ನಿಯ ಕೈಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಹಾಕಿಕೊಂಡಿದ್ದು, ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದೆ.

 

ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರ ಅವರೇ ಆರೋಪಿ. ಇವರು ತಮ್ಮಿಂದ ಮಾರ್ಗದರ್ಶನ ಪಡೆಯುತ್ತಿದ್ದ ಪಿಎಚ್‌ಡಿ ವಿದ್ಯಾರ್ಥಿನಿಯನ್ನೇ ಮನೆಗೆ ಕರೆಸಿಕೊಂಡಿದ್ದಾರೆ. ಮನೆಯ ಆಕೆಯ ಮೇಲೆ ಅತ್ಯಾಚಾರ ಯತ್ನವಾಗಿದ್ದು, ವಿದ್ಯಾರ್ಥಿ ತಪ್ಪಿಸಿಕೊಳ್ಳುವ ಸಲುವಾಗಿ ಕೂಗಾಟ-ಚೀರಾಟ ನಡೆಸಿದ್ದಾಳೆ. ಅದೇ ಸಂದರ್ಭದಲ್ಲಿ ಪ್ರಾಧ್ಯಾಪಕರ ಪತ್ನಿ ಲೋಲಾಕ್ಷಿ ಮನೆಗೆ ಬಂದಿದ್ದು, ರಾಮಚಂದ್ರ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಈ ಬಗ್ಗೆ ಸಂತ್ರಸ್ತೆ ಜಯಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತೆ ಹಾಗೂ ಪತಿಯನ್ನು ಲೋಲಾಕ್ಷಿ ಠಾಣೆಗೆ ಕರೆದುಕೊಂಡು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ಪತ್ನಿ ಲೋಲಾಕ್ಷಿ ಕೂಡ ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪತ್ನಿ ಲೋಲಾಕ್ಷಿ ಪ್ರಾಧ್ಯಾಪಕರ ಮತ್ತಷ್ಟು ಕಾಮಪುರಾಣವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.

ನನ್ನ ಪತಿ ಪ್ರೊ.ರಾಮಚಂದ್ರ ಡಿಪಾರ್ಟ್‌ಮೆಂಟ್‌ನಲ್ಲೇ ವಿದ್ಯಾರ್ಥಿನಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ. ಅವರಿಂದ ಪಿಎಚ್‌ಡಿ ಮಾರ್ಗದರ್ಶನ ಪಡೆಯುವ ಕೆಲ ಪುರುಷ ವಿದ್ಯಾರ್ಥಿಗಳು ಪತಿಯ ಬಳಿಗೆ ಯುವತಿಯರನ್ನು ಕಳುಹಿಸುತ್ತಿದ್ದರು. ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾರೆ. ಇವೆಲ್ಲದರ ಬಗ್ಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು. ಅದು ಇಂದು ಸಾಬೀತಾಗಿದೆ ಎಂದಿರುವ ಪತ್ನಿ ಲೋಲಾಕ್ಷಿ, ಮನೆಯಲ್ಲಿ ನಡೆದ ಘಟನೆಯನ್ನೂ ಪೊಲೀಸರಿಗೆ ವಿವರಿಸಿದ್ದಾರೆ.

ನಾನು ಇಂದು ಕಾಲೇಜಿಗೆ ಹೋಗಿದ್ದೆ. ಆದರೆ ಸ್ಟಡಿ ಮೆಟಿರಿಯಲ್ ತೆಗೆದುಕೊಳ್ಳುವ ಸಲುವಾಗಿ ಮನೆಗೆ ವಾಪಸ್ ಬಂದಿದ್ದೆ. ಆಗ ಮನೆಯಲ್ಲಿ ಕೂಗಾಟ ಕೇಳಿಸುತ್ತಿತ್ತು. ಬಾಗಿಲು ತೆಗೆಸಿದಾಗ ಸಂತ್ರಸ್ತೆ ನನ್ನ ಕಾಲು
ಹಿಡಿದುಕೊಂಡಳು. ನನ್ನ ಮೇಲೆ ಅತ್ಯಾಚಾರವಾಗಿದೆ ಅಂತ ಹೇಳಿಕೊಂಡಳು. ಕೂಡಲೇ ಇಬ್ಬರನ್ನೂ ಪೋಲಿಸ್ ಠಾಣೆಗೆ ಕರೆದುಕೊಂಡು ಬಂದಿದ್ದೇನೆ. ಬೇರೆ ಯಾವ ಯುವತಿಯ ಮೇಲೂ ಇಂತಹ ಕೃತ್ಯ ನಡೆಯಬಾರದು. ಹೀಗಾಗಿ ನಾ ಮುಂದೆ ನಿಂತು ದೂರು ದಾಖಲಿಸಿದ್ದೇನೆ. ವಿವಿಯ ಕುಲಪತಿ-ಕುಲಸಚಿವರ ಗಮನಕ್ಕೂ ತಂದಿದ್ದೇನೆ ಎಂದು ಆರೋಪಿಯ ಪತ್ನಿ, ಮೈಸೂರು ವಿವಿಯ ಪ್ರಾಧ್ಯಾಪಕಿಯ ಆಗಿರುವ ಡಾ.ಲೋಲಾಕ್ಷಿ ಪೊಲೀಸರಿಗೆ ತಿಳಿಸಿದ್ದಾರೆ.

Leave A Reply

Your email address will not be published.