ಪ್ರಿಯಕರನ ವಿಡಿಯೋ ಕಾಲ್ ಸೂಚನೆಯೇ ಆ ಕೊಲೆಗೆ ಮಾರ್ಗದರ್ಶನವಾಗಿತ್ತು!!ಪ್ರೀತಿಗೆ ಅಡ್ಡ ಬಂದಳೆಂದು ಹೆತ್ತಬ್ಬೆಯನ್ನೇ ಕೊಂದ ಬಾಲಕಿ

ಪ್ರಿಯಕರನ ಮಾತನ್ನು ನಂಬಿ, ಆತ ವಿಡಿಯೋ ಕಾಲ್ ಮೂಲಕ ಹೇಳಿಕೊಟ್ಟ ರೀತಿಯಲ್ಲೇ ಅಪ್ರಾಪ್ತೆಯೊಬ್ಬಳು ತನ್ನ ಹೆತ್ತ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಅಮಾನವೀಯ ಘಟನೆ ಹರ್ಯಾಣದ ಫರಿದಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

 

ಘಟನೆ ವಿವರ: 16 ವರ್ಷದ ಆ ಅಪ್ರಾಪ್ತ ಬಾಲಕಿಗೆ 18 ವರ್ಷದ ಯುವಕನೊಬ್ಬನೊಂದಿಗೆ ಪ್ರೇಮಾಂಕುರವಾಗಿತ್ತು. ಆತನೂ ಈಕೆಯನ್ನು ತುಂಬಾ ಪ್ರೀತಿಸುತ್ತಿದ್ದ.ಆದರೆ ಇವರಿಬ್ಬರ ಪ್ರೀತಿಗೆ ಬಾಲಕಿಯ ತಾಯಿಯ ವಿರೋಧವಿದ್ದು, ಇದರಿಂದ ಆ ಪ್ರೇಮಿಗಳು ಕೋಪಗೊಂಡಿದ್ದರು ಎನ್ನಲಾಗಿದೆ.

ಹೇಗಾದರೂ ಮಾಡಿ ಪ್ರೀತಿಗೆ ಅಡ್ಡ ಬರುತ್ತಿರುವ ತಾಯಿಯನ್ನು ಮುಗಿಸಲು ಆ ದಿನ ಅವರಿಬ್ಬರೂ ಯೋಜನೆ ರೂಪಿಸಿದ್ದರು. ಅದರಂತೆ ಜುಲೈ 10 ರಂದು ಯುವಕನು ಯುವತಿಯ ಕೈಯ್ಯಲ್ಲಿ ನಿದ್ದೆ ಮಾತ್ರೆಯನ್ನು ನೀಡಿದ್ದು, ಆ ಬಳಿಕ ಅದೇ ದಿನ ರಾತ್ರಿ ತಾನಿದ್ದಲ್ಲಿಂದಲೇ ಬಾಲಕಿಗೆ ವಿಡಿಯೋ ಕಾಲ್ ಮಾಡಿ ಕೊಲೆಗೆ ಬೇಕಾದ ಸೂಚನೆಗಳನ್ನು ನೀಡಲು ಪ್ರಾರಂಭಿಸಿದ್ದ.

ಯುವಕನ ಸೂಚನೆಗಳ ಪ್ರಕಾರವೇ ಬಾಲಕಿಯು ತನ್ನ ತಾಯಿಗೆ ಲಿಂಬೆ ಪಾನಕದಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿಕೊಟ್ಟು ಹತ್ಯೆ ಮಾಡಿದ್ದಾಳೆ.

ಘಟನೆಯ ನಂತರ ಬಾಲಕಿಯ ಸೋದರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದಾರೆ.18 ವರ್ಷದ ಯುವಕನನ್ನು ಜೈಲಿಗೆ ಹಾಕಲಾಗಿದ್ದು, ಹುಡುಗಿ ಇನ್ನೂ ಅಪ್ರಾಪ್ತಳಾಗಿದ್ದರಿಂದ ಬಾಲಾಪರಾಧಿ ಕೇಂದ್ರಕ್ಕೆ ಕಳಿಸಲಾಗುತ್ತದೆ ಎಂದು ಫರಿದಾಬಾದ್​ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.