ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಕೋಟ ಸಚಿವರಿಗೆ ಶುಭಾಶಯ ಕೋರಿದ ಬ್ಯಾನರ್|ವಿರೋಧ ಪಕ್ಷದಲ್ಲಿಯೂ ಕೋಟಾರಿಗೆ ಇದ್ದಾರೆಯೇ ಅಭಿಮಾನಿಗಳು?!!

ರಾಜಕೀಯ ಸಭೆ ಸಮಾರಂಭಗಳಲ್ಲಿ ಒಬ್ಬರಿಗೊಬ್ಬರು ಕಚ್ಚಾಟದ ಮಾತುಗಳನ್ನಾಡಿ ಕಾರ್ಯಕರ್ತರನ್ನು ದಂಗೆ ಏಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲ ನಾಯಕರು ಒಂದು ಕಡೆಯಾದರೆ,ಆ ಬಳಿಕ ಇನ್ನೊಂದು ವೇದಿಕೆಯಲ್ಲಿ ಭಾರೀ ಕುಶಲೋಪರಿಯಲ್ಲಿ ತೊಡಗುವ ಕೆಲ ನಾಯಕರೂ ಇದ್ದಾರೆ. ಆದರೆ ಇದೆಲ್ಲದರ ಮಧ್ಯೆ ಪಕ್ಷ ಬೇರೆಯಾಗಿ, ಉತ್ತಮ ನಾಯಕ ಗೆದ್ದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಾಗ ಖುಷಿಯಿಂದ ಪಕ್ಷಬೇಧ ಮರೆದು ಶುಭ ಕೋರುವ ಕಾರ್ಯಕರ್ತರೂ ನಮ್ಮ ನಡುವೆ ಇದ್ದಾರೆ. ಇದಕ್ಕೆಲ್ಲ ಉಡುಪಿಯಲ್ಲಿ ನಡೆದ ಆ ಒಂದು ಘಟನೆ ಪ್ರತ್ಯಕ್ಷ ಸಾಕ್ಷಿ.

 

ಪ್ರಸಕ್ತ ರಾಜಕಾರಣದಲ್ಲಿ ಇಂತಹ ವಿದ್ಯಮಾನಗಳು ಅಪರೂಪ ಎನ್ನಬಹುದು. ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೋಟ ಶ್ರೀನಿವಾಸ ಪೂಜಾರಿಗೆ ಸ್ವಂತ ಪಕ್ಷ ಮಾತ್ರವಲ್ಲ, ವಿರೋಧ ಪಕ್ಷಗಳಲ್ಲೂ ಅಭಿಮಾನಿಗಳಿದ್ದಾರೆ ಅನ್ನೋದಕ್ಕೆ ಈ ಫೊಟೋ ಸಾಕ್ಷಿ.

ಕುಂದಾಪುರ ತಾಲೂಕಿನ ಶೇಡಿಮನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಕೋಟ ಶ್ರೀನಿವಾಸ ಪೂಜಾರಿಗೆ ಶುಭಾಶಯ ಕೋರಿ ಬ್ಯಾನರ್ ಹಾಕಿದ್ದು,ಅದರಲ್ಲಿ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಕಾರ್ಯಕರ್ತ ಎಂದು ನಮೂದಿಸಲಾಗಿದೆ. ಸದ್ಯ ಈ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಸ್ವಂತ ತಮ್ಮ ಪಕ್ಷವಲ್ಲದೇ ವಿರೋಧ ಪಕ್ಷದಲ್ಲೂ ಕೋಟಾ ರಿಗೆ ಅಭಿಮಾನಿಗಳಿದ್ದಾರೆ ಎಂಬುವುದು ಇಲ್ಲಿ ಸಾಬೀತಾಗಿದೆ.

Leave A Reply

Your email address will not be published.