ಬಿಎಸ್ಪಿ ಶಾಸಕ ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆ , ಸಿಎಂ,ಮಾಜಿ ಸಿಎಂ , ರಾಜ್ಯಾಧ್ಯಕ್ಷರ ಉಪಸ್ಥಿತಿ

ಬಿಎಸ್ ಪಿ ಶಾಸಕ ಎನ್.ಮಹೇಶ್ ಅವರು ಬಿಜೆಪಿ ನಾಯಕರ ಸಮ್ಮುಖದಲ್ಲಿ ಗುರುವಾರ ಬಿಜೆಪಿಗೆ ಸೇರ್ಪಡೆಯಾದರು. ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

 

ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಮಹೇಶ್ ಚಳುವಳಿಯ ಹಿನ್ನೆಲೆಯಿಂದ ಬಂದವರು. ಅವರ ಸಂಘಟನಾ ಶಕ್ತಿ ಬಹು ದೊಡ್ಡದು. ಅವರು ಶಾಸಕರಾಗುವ ಮುನ್ನವೇ ದಲಿತರ ಹೃದಯ ಗೆದ್ದವರು. ಕೊಳ್ಳೆಗಾಲದ ಎಲ್ಲ ಜನಾಂಗ ಅವರನ್ನು ಆರಿಸಿದೆ. ನಮ ಪಕ್ಷದ ಸಿದ್ಧಾಂತ ಮನವರಿಕೆಯಾದ ಮೇಲೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಬೆಂಬಲ ಮಾಡಿದ್ದರು. ಈ ಹಿಂದೆ ಯಡಿಯೂರಪ್ಪನವರಿಗೆ ಸಹಕಾರ ಕೊಟ್ಟಿದ್ದರು ಇಂದು ಅವರು ನಮ್ಮ ಪಕ್ಷಕ್ಕೆ ಬರ್ತಿದ್ದಾರೆ, ಅವರ ಸೇವೆಯನ್ನು ಪಕ್ಷ ಬಳಸಿಕೊಳ್ಳಲಿದೆ ಎಂದರು.

Leave A Reply

Your email address will not be published.