ಒಲಿಂಪಿಕ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಟ್ರಕ್ ಚಾಲಕರನ್ನು ಹುಡುಕ್ತಿದ್ದಾರಂತೆ | ಪದಕ ಸಾಗಿಸಲಂತೂ ಅಲ್ಲ, ಮತ್ತೇನಕ್ಕಿರಬಹುದು ?!

ನವದೆಹಲಿ: ಕೀರ್ತಿ ಹೆಸರು ದುಡ್ಡು ಬರುವಾಗ ಮದವೇರುವ ಜನರ ಮಧ್ಯೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ ಮೀರಾಬಾಯಿ ಚಾನು ತಾನು ನಡೆದು ಬಂದ ಹಾದಿಯನ್ನು ಮರೆತಿಲ್ಲ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ.

 

ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದು ಈಗ ಇತಿಹಾಸ. ದೇಶದ ಮೂಲೆ ಮೂಲೆಗಳಲ್ಲೂ ಸುದ್ದಿಯಾಗಿರುವ ಮೀರಾ ಇದೀಗ ಟ್ರಕ್ ಡ್ರೈವರ್ ಗಳಿಗಾಗಿ ಹುಡುಕಾಡುತ್ತಿದ್ದಾರಂತೆ. ಸೋಜಿಗದ ವಿಷಯ. ಯಾಕೆ ಗೆದ್ದ ಬೆಳ್ಳಿಯ ಪದಕ ಅಷ್ಟು ಭಾರವೇ ? ಎಂದು ತಮಾಷೆ ಮಾಡಿದವರೂ ಇಲ್ಲದಿಲ್ಲ. ಆದರೆ ನಿಜ ವಿಷಯ ಬೇರೆಯೇ ಇದೆ.

ಮೀರಾಬಾಯಿದು ಮಧ್ಯಮ ವರ್ಗದ ಕುಟುಂಬ. ಆಕೆ ಪ್ರತಿದಿನ ನೊಂಗ್‌ಪೋಕ್ ಕಾಕ್ಸಿಂಗ್ ಹಳ್ಳಿಯಲ್ಲಿರುವ ಆಕೆಯ ಮನೆಯಿಂದ ಇಂಫಾಲ್‌ನ ಖುಮಾನ್ ಲಂಪಾಕ್ ಕ್ರೀಡಾ ಸಂಕೀರ್ಣದಲ್ಲಿರುವ ತರಬೇತಿ ಕೇಂದ್ರಕ್ಕೆ ವೇಟ್ ಲಿಫ್ಟಿಂಗ್ ಕಲಿಯಲು ಹೋಗುತ್ತಿದ್ದಳಂತೆ. ಆ ವೇಳೆ ಅನೇಕ ಟ್ರಕ್ ಚಾಲಕ ಆಕೆಯ ಸಹಾಯಕ್ಕೆ ಬಂದು, ಅವಳನ್ನು ತರಬೇತಿ ಕೇಂದ್ರದವ ಡ್ರಾಪ್ ಮಾಡುತ್ತಿದ್ದರಂತೆ.

ಇದೀಗ ಬೆಳ್ಳಿ ಗೆದ್ದಿರುವ ಮೀರಾ ತನ್ನ ಹಿಂದಿನ ದಾರಿಯನ್ನು ತಿರುಗ ನೋಡಿದ್ದಾರೆ. ಅವರೆಲ್ಲರೂ ಸಹಾಯಕ್ಕೆ ನಿಂತಿದ್ದರಿಂದಲೇ ನಾನು ಪದಕ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಇದೀಗ ಅವರನ್ನೆಲ್ಲ ಭೇಟಿ ಮಾಡಿ ಧನ್ಯವಾದ ತಿಳಿಸಬೇಕಿದೆ ಎಂದು ಮೀರಾ ಹೇಳಿದ್ದಾರೆ. ಅದಕ್ಕಾಗಿಯೇ ಆ ಟ್ರಕ್ ಡ್ರೈವರ್‌ಗಳನ್ನು ಹುಡುಕಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Leave A Reply

Your email address will not be published.