ಕುರಿ ಕೋಳಿ ಮೀನಿಗಿಂತ ಗೋಮಾಂಸ ಹೆಚ್ಚು ಸೇವಿಸಿ | ಕರೆ ನೀಡಿದ ಬಿಜೆಪಿಯ ಪಶು ಸಂಗೋಪನಾ ಸಚಿವ

Share the Article

ಮೇಘಾಲಯ: ಗೋ ಹತ್ಯೆ ನಿಲ್ಲಿಸಬೇಕು ಅದರ ಸಂರಕ್ಷಣೆ ಆಗಬೇಕು ಎನ್ನುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ಗೋಮಾಂಸವನ್ನೇ ಅತಿಯಾಗಿ ಬಳಸಿ ಎಂದು ಹೇಳಿ ಇದೀಗ ದೇಶದಲ್ಲಿ ಚರ್ಚೆಗೆ ಕಾರಣವಾಗುವಂತೆ ಮಾಡಿದ್ದಾರೆ. ಅದೂ ಯಾರೋ ಜನ ಸಾಮಾನ್ಯರೋ, ಅಥವಾ ಇನ್ಯಾರೋ ಗೋ ಭಕ್ಷಣೆ ಮಾಡುವ ಜನ ಹೇಳಿದ್ದರೆ ಇಷ್ಟು ಗುಲ್ಲೇಳುತ್ತಿರಲಿಲ್ಲ. ಹಾಗಂತ ಘಂಟಾ ಘೋಷವಾಗಿ ಹೇಳಿದ್ದು ಬಿಜೆಪಿಯ ಓರ್ವ ಸಚಿವ !!

ಮೇಘಾಲಯದ ಬಿಜೆಪಿ ಪಶು ಸಂಗೋಪನೆ ಮತ್ತು ಪಶು ವೈದ್ಯ ಖಾತೆ ಸಚಿವ ಸಣ್ಣೂರ್ ಶುಲ್ಫ್ ಇವರು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಪ್ರತಿಯೊಬ್ಬರೂ, ತಮಗೆ ಇಷ್ಟವಾದ ಆಹಾರವನ್ನು ಸೇವಿಸಲು ಸ್ವತಂತ್ರರು ಎಂದು ಹೇಳುವ ಮೂಲಕ ಜನರಿಗೆ ಗೋಮಾಂಸ ಸೇವಿಸಲು ಉತ್ತೇಜನ ನೀಡಿದ್ದಾರೆ.

ಕುರಿ, ಕೋಳಿ, ಮೀನಿನ ಮಾಂಸಕ್ಕಿಂತಲೂ ಗೋಮಾಂಸವನ್ನು ಹೆಚ್ಚು ಸೇವಿಸಿ ಎಂದು ಹೇಳಿಕೆ ನೀಡಿದ್ದಾರೆ. ಅದಲ್ಲದೆ ಗೋ ಮಾಂಸ ಹೆಚ್ಚು ಬಳಸುವುದರಿಂದ,ತಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿ ಮಾಡುತ್ತದೆ ಎನ್ನುವ ಆತಂಕವನ್ನು ದೂರ ಮಾಡಲಿದೆ ಎಂದಿದ್ದಾರೆ.

ಇದೀಗ ಎಲ್ಲರಿಗೂ ಈ ಸಚಿವರ ಮಾತನ್ನು ಕೇಳಿ ಆಶ್ಚರ್ಯವಾಗಿದೆ. ಅಂತೆಯೇ ಇದು ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ.

Leave A Reply