ಒಂದೇ ಕುಟುಂಬದ 6 ಮಂದಿ ನಿಗೂಢ ಸಾವು | ಇನ್ವೆಸ್ಟಿಗೇಷನ್ ಗೆ ಇಳಿದ ಅಧಿಕಾರಿಗಳು

ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲಿ ತಾಲೂಕಿನ ಲಂಕವಾನಿದಿಬ್ಬ ಗ್ರಾಮದಲ್ಲಿ ನಡೆದಿದೆ.

 

ಮೃತಪಟ್ಟವರನ್ನು ರಾಮಮೂರ್ತಿ, ಕಿರಣ್, ಮನೋಜ್, ವಂಡಬೋ, ಮಹೇಂದ್ರ, ಒಡಿಶಾ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ.

ರಾತ್ರಿ ಮಲಗಿದ್ದ ವೇಳೆ ಕರೆಂಟ್ ತಂತಿ ಶೆಡ್ ಮೇಲೆ ಬಿದ್ದ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ ಶಾರ್ಟ್ ಸರ್ಕ್ಯೂಟ್ ಆದ ಬಗ್ಗೆ ಯಾವುದೇ ಕುರುಹು ಇಲ್ಲ. ಆದ್ದರಿಂದ ಇದು ಕಾರಣವಲ್ಲ ಎಂದಿದ್ದಾರೆ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು.

ಆದರೆ ಬೆಂಕಿ ತಗುಲಿರುವುದಂತೂ ಗ್ಯಾರೆಂಟಿ. ಆದರೆ ಆ ಬೆಂಕಿ ಬಂದ ಹೇಗೆ ಎಂಬ ಬಗ್ಗೆ ಇದುವರೆಗೂ ನಿಗೂಢವಾಗಿಯೇ ಉಳಿದಿದೆ. ಮಲಗಿದ್ದ ಶೆಡ್‌ನಲ್ಲಿ ಬಹುಶಃ ರಸಾಯನಿಕ ಇದ್ದರಿಬಹುದು. ಅದಕ್ಕೆ ಬೆಂಕಿ ತಗುಲಿ ಘಟನೆ ಸಂಭವಿಸಿರಬಹುದು ಎನ್ನಲಾಗುತ್ತಿದೆಯಾದರೂ ಸಾವಿನ ಕಾರಣ ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ.

ಎಲ್ಲರೂ ಅನ್ಯೋನ್ಯರಾಗಿದ್ದ ಹಿನ್ನೆಲೆಯಲ್ಲಿ ಹಾಗೂ ಯಾವುದೇ ಸಮಸ್ಯೆ ಈ ಕುಟುಂಬಕ್ಕೆ ಇರದ ಕಾರಣ ಇದು ಆತ್ಮಹತ್ಯೆಯೂ ಅಲ್ಲ, ಮತ್ತೆ ಕೊಲೆ ಮಾಡುವಂಥ ಉದ್ದೇಶವೂ ಯಾರಿಗೂ ಇದ್ದಂತಿರಲಿಲ್ಲ ಎನ್ನಲಾಗಿದ್ದು, ಸಾವಿನ ಕಾರಣವನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಗಳು ತೊಡಗಿಕೊಂಡಿದ್ದಾರೆ.

Leave A Reply

Your email address will not be published.