ಕನ್ನಡ, ತುಳು, ಕೊಂಕಣಿ ನಟಿ ವಿನ್ನಿ ಫರ್ನಾಂಡಿಸ್ ವಿಧಿವಶ

ಮಂಗಳೂರು: ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಯ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ವಿನ್ನಿ ಫರ್ನಾಂಡಿಸ್ (63) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

 

ಕೊಂಕಣಿ ನಾಟಕಗಳಲ್ಲಿ ನಟನೆ ಮಾಡುವ ಮೂಲಕ ಕಲಾಜೀವನ ಆರಂಭಿಸಿದ ಇವರಿಗೆ ಬಳಿಕ, ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ನಟಿಸುವ ಅವಕಾಶ ಲಭಿಸಿತು.

ಇವರು ಹಾಸ್ಯ, ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಕೂಡ ಪಡೆದಿದ್ದರು.

ವಿನ್ನಿ ಫರ್ನಾಂಡಿಸ್ ಅವರು ಪತಿ ವಿನ್ಸೆಂತೆ ಮಕ್ಕಳಾದ ಪ್ರತಾಪ್, ಬಬಿತಾ ಅವರನ್ನು ಅಗಲಿದ್ದಾರೆ.

Leave A Reply

Your email address will not be published.