ಎಸಿಬಿ ದಾಳಿಯ ವೇಳೆ ದ್ವಿತೀಯ ದರ್ಜೆಯ ನೌಕರರನ್ನು ಟವೆಲ್, ಬನ್ಯಾನ್ ನಲ್ಲಿ ಪೊಲೀಸ್ ಠಾಣೆಗೆ ಕರೆದು ತಂದು ನಿಲ್ಲಿಸಿದರು !
ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯನ್ನು ಎಸಿಬಿ ಬಂಧಿಸಿದ್ದು, ಹಣ ಪಡೆಯುತ್ತಿರುವ ಸಮಯದಲ್ಲಿ ಎಂಟ್ರಿ ಕೊಟ್ಟ ಭ್ರಷ್ಟಾಚರ ನಿಗ್ರಹ ದಳ (ಎಸಿಬಿ) ತಂಡ ಟವೆಲ್, ಬನಿಯನ್ ಮೇಲೆಯೇ ಅಧಿಕಾರಿಯನ್ನು ಕಚೇರಿಗೆ ಕರೆ ತಂದಿದ್ದಾರೆ. ಇದೀಗ ಪೊಲೀಸ್ ಅಧಿಕಾರಿಗಳ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರದ ರಾಮ್ ಮಿಲನ್ ಯಾದವ್ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವಾಗ ತಗ್ಲಾಕೊಂಡ ದ್ವಿತೀಯ ದರ್ಜೆಯ ನೌಕರ. ಅಬ್ದುಲ್ ಖಾನ್ ಎಂಬವರ ವರದಿ ಸಿದ್ಧಪಡಿಸಲು ರಾಮ್ ಮಿಲನ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಮುಂದಿಟ್ಟಿದ್ದರಿಂದ ಎಸಿಬಿಗೆ ದೂರು ನೀಡಿದ್ದರು.
ಸದ್ಯ ಆರೋಪಿಯನ್ನು ಠಾಣೆಗೆ ಕರೆ ತಂದಿರುವ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸಿಬಿ ಅಧಿಕಾರಿ ರಾಮಧಾರಿ ಮಿಶ್ರಾ, ದೂರು ಸಲ್ಲಿಕೆಯಾಗಿದ್ದರಿಂದ ಲಂಚ ಪಡೆಯುವ ವೇಳೆ ನಮ್ಮ ತಂಡ ದಾಳಿ ನಡೆಸಿತ್ತು. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಬನೀನು ಟವೆಲ್ ನಲ್ಲಿ ತಂದು ನಿಲ್ಲಿಸಿದ್ದಕ್ಕೆ ಪೋಲೀಸರು ಏನೂ ಪ್ರತಿಕ್ರಿಯೆ ನೀಡಿಲ್ಲ.
ಉಪ ನಿರೀಕ್ಷಕರಾಗಿರುವ ರಾಮ್ ಯಾದವ್ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರು. ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು 10 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದ್ರೆ ನನಗೆ ಹಣ ನೀಡಲು ಇಷ್ಟವಿರಲಿಲ್ಲ. ಹಾಗಾಗಿ ಎಸಿಬಿಗೆ ದೂರು ನೀಡಿದ್ದೆ ಎಂದು ಅಬ್ದುಲ್ ಖಾನ್ ತಿಳಿಸಿದ್ದಾರೆ.