ರಕ್ಷಕನೇ ಭಕ್ಷಕನಾದ|ಠಾಣೆಗೆ ದೂರು ನೀಡಲು ಬಂದ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ!!ಮಂಗಳೂರಿನ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಂಧನ
ಪೊಲೀಸರೆಂದರೆ ಅದೇನೋ ಒಂದು ಭಯದ, ಆ ಭಯದ ಜೊತೆಗೆ ಖಾಕಿ ಎಂದರೆ ಏನೋ ಧೈರ್ಯ. ಅನ್ಯಾಯ ನಡೆದಾಗ ಪೊಲೀಸರು ನ್ಯಾಯ ದೊರಕಿಸಿ ಕೊಡುತ್ತಾರೆ, ಅನ್ಯಾಯಕ್ಕೊಳಗಾದವರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುತ್ತಾರೆ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ, ಅಂತಹ ರಕ್ಷಕರೇ ಭಕ್ಷಕರಾದರೇ?
ಹೌದು. ಇಂತಹದೊಂದು ಘಟನೆ ನಡೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ.ಅನ್ಯಾಯಕ್ಕೊಳಗಾದ ಅಪ್ರಾಪ್ತ ಯುವತಿಯು ಠಾಣೆಗೆ ದೂರು ನೀಡಲು ಬಂದಾಗ ಅನುಚಿತವಾಗಿ ವರ್ತಿಸಿ, ತಾನೊಬ್ಬ ರಕ್ಷಕನೆಂಬುದನ್ನು ಮರೆತ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಸದ್ಯ ದೂರು ದಾಖಲಾಗಿದೆ.
ಘಟನೆ ವಿವರ:ಠಾಣೆಗೆ ದೂರು ನೀಡಲೆಂದು ಅಪ್ರಾಪ್ತ ಬಾಲಕಿ ಆಕೆಯ ಪೋಷಕರೊಂದಿಗೆ ಬಂದಿದ್ದಳು, ಈ ಸಂದರ್ಭ ಹೆಡ್ ಕಾನ್ಸ್ಟೇಬಲ್ ಸಿಬ್ಬಂದಿಯೊಬ್ಬರು ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಆ ಬಳಿಕ ಆಕೆಗೆ ಕಾಲ್, ಮೇಸಜ್ ಮಾಡಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಸಿಬ್ಬಂದಿ ವಿರುದ್ಧ ದೂರು ದಾಖಲಾಗುತ್ತದೆ. ಸದ್ಯ ಘಟನೆಗೆ ಪೂರಕವಾದ ಎಲ್ಲಾ ಸಾಕ್ಷ್ಯಗಳು ದೊರೆತಿರುವುದರಿಂದ ಆರೋಪಿ ಸಿಬ್ಬಂದಿಯನ್ನು ನಿನ್ನೆ ಪೊಲೀಸರು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತನಿಗೆ ಸೂಕ್ತ ಕಾನೂನಿನ ಕ್ರಮ ಜರುಗಿಸುವರೇ, ಪ್ರಕರಣದ ಸತ್ಯಾಸತ್ಯತೆ ಹೊರಬರುವುದೇ ಎಂಬುವುದನ್ನು ಕಾದುನೋಡಬೇಕಾಗಿದೆ.