ಸಂಪುಟ ಆಯ್ಕೆ ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರ |ಪ್ರಾದೇಶಿಕತೆ,ಸಾಮಾಜಿಕ ನ್ಯಾಯ ಪರಿಶೀಲಿಸಿ ಸಂಪುಟ ರಚನೆ – ನಳಿನ್ ಕುಮಾರ್ ಕಟೀಲ್

Share the Article

ಬೆಂಗಳೂರು : ಬಸವರಾಜ್ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಈಗ ಸಂಪುಟ ರಚನೆಯ ಬೆಳವಣಿಗೆ ಆರಂಭವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ,ಸಂಪುಟ ರಚನೆ ಸಿಎಂ ಅವರ ವಿವೇಚನಾ ಅಧಿಕಾರವಾಗಿದೆ. ಪಕ್ಷದ ವರಿಷ್ಠರ ಜತೆ ಚರ್ಚಿಸಿ ವಾರದಲ್ಲೇ ಸಂಪುಟ ವಿಸ್ತರಣೆ ನಡೆಸಲಾಗುವುದು. ವಲಸಿಗರು, ಮೂಲ ಎಂಬ ಪ್ರಶ್ನೆಯೇ ಇಲ್ಲ. ಪ್ರಾದೇಶಿಕತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ಪರಿಶೀಲಿಸಿ ಸಂಪುಟದಲ್ಲಿ ಸ್ಥಾನ ನೀಡಲಾಗುವುದು ಎಂದು ಹೇಳಿದ್ದಾರೆ.

Leave A Reply