ಹಳ್ಳ ದಾಟುವಾಗ ನಡೆದ ದುರಂತ | ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಲ್ವರು ಮಕ್ಕಳು ಸಾವು

ಹಳ್ಳ ದಾಟುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಲ್ವರು ಮಕ್ಕಳು ದುರಂತ ಸಾವಿಗೀಡಾಗಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

 

ವಿ.ಮಡುಗುಲಾ ಮಂಡಲ್ ಜಮ್ಮದೇವಿಪೇಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಕ್ಕಳನ್ನು ಜಾಹ್ನವಿಯುಟ್ಯೂಬ್ (11) ಝಾನ್ಸಿ (8), ಶರ್ಮಿಳಾ (7) ಮತ್ತು ಮಹೀಂದರ್ (7) ಎಂದು ಗುರುತಿಸಲಾಗಿದೆ.

ಮಧ್ಯಾಹ್ನದ ಹೊತ್ತಿಗೆ ಮಕ್ಕಳ ಪಾಲಕರು ಬಟ್ಟೆ ಒಗೆಯಲು ಹೋಗಿದ್ದರು. ಮಕ್ಕಳು ಕೂಡ ಜತೆಯಲ್ಲಿ ತೆರಳಿದ್ದರು. ಈ ವೇಳೆ ನೀರಿನ ಹಳ್ಳವನ್ನು ದಾಟುವಾಗ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ. ಪಾಲಕರು ಸ್ಥಳೀಯರನ್ನು ಕೂಗಿ ಕರೆದಿದ್ದು, ತಕ್ಷಣ ಸ್ಥಳೀಯರು ನೀರಿಗೆ ಧುಮುಕಿ 4 ಮಕ್ಕಳನ್ನು ಹೊರತಂದಿದ್ದಾರೆ. ಆದರೆ ಅದಾಗಲೇ ಮಕ್ಕಳು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾದ ಬಗ್ಗೆ ತಿಳಿದುಬಂದಿಲ್ಲ.

Leave A Reply

Your email address will not be published.