ಸಹಾಯದ ಅಗತ್ಯಬಿದ್ದರೆ, ಕಾರ್ ಟೈರ್ ಚೇಂಜ್ ಮಾಡಿ ಕೊಡಲೂ ಸೈ | ಮಂಗಳೂರು ಪೊಲೀಸರ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ !!

ಮಂಗಳೂರು : ಕ್ರೈಮ್ ನಿಯಂತ್ರಣ ಮಾಡೋದರಲ್ಲಿ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚುವುದರಲ್ಲಿ ಸ್ಪೀಡಾಗಿ ತಲೆ ಓಡಿಸುವ ಮಂಗಳೂರು ಪೊಲೀಸರು ಇವತ್ತು ರಾಜ್ಯಾದ್ಯಂತ ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಯಾರಿಗಾದರೂ ಸಹಾಯ ಮಾಡುವ ಅಗತ್ಯ ಬಿದ್ದರೆ, ಯಾವುದೇ ಕೆಲಸಕ್ಕೂ ಸೈ ಎಂದು ಈ ಪೋಲೀಸರು ತೋರಿಸಿಕೊಟ್ಟಿದ್ದಾರೆ.

 

ನಿನ್ನೆ ಮಹಿಳೆಯೊಬ್ಬರಿಗೆ ಪಂಕ್ಚರ್ ಆಗಿದ್ದ ಕಾರಿನ ಟಯರ್ ಬದಲಾಯಿಸಿ ಕೊಡುವ ಮೂಲಕ ಮಂಗಳೂರು ದಕ್ಷಿಣ ಸಂಚಾರ ( ನಾಗುರಿ) ಠಾಣಾ ಪೊಲೀಸರು ನೆರವಾಗುವ ಮೂಲಕ ತಮ್ಮ ಸಹಾಯದ ಗುಣವನ್ನು ಪ್ರಕಟಿಸಿದ್ದಾರೆ.

ನಿನ್ನೆ, ಭಾನುವಾರ ಸಂಜೆ 6 ಗಂಟೆಗೆ ಕುಂದಾಪುರ ಮೂಲದ ಮಹಿಳೆ ಕಾರಿನಲ್ಲಿ ಪಂಪ್ ವೆಲ್ ಸಮೀಪ ಬರುತ್ತಿದ್ದಂತೆಯೇ ಟಯರ್ ಪಂಕ್ಚರ್ ಆಗಿತ್ತು. ಆ ವೇಳೆ ಗಸ್ತು ವಾಹನದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರ ಬಳಿ ಟಯರ್ ಹಾಕುವವರ ಬಗ್ಗೆ ವಿಚಾರಿಸಿದರು. ಪಕ್ಕದಲ್ಲಿ ಯಾವುದೇ ಶಾಪ್ ಅವರ ಗಮನಕ್ಕೆ ಬಂದಿಲ್ಲ. ಆಗ ಆ ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ಆಕೆಯ ಕಾರ್ ಟಯರನ್ನು ಬದಲಿಸಿ ಕೊಟ್ಟಿದ್ದಾರೆ. ಅವರ ಈ ನಡೆ ರಾಜ್ಯಾದ್ಯಂತ ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.

ಈ ಸಂದರ್ಭ ನಾಗುರಿ ಸಂಚಾರಿ ಠಾಣೆ ಎಎಸ್ ಐ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾರ್ಡ್ ಆಸೀಫ್ ಇದ್ದರು.

Leave A Reply

Your email address will not be published.