ಅತಿಥಿ ಸತ್ಕಾರ ಅಂದ್ರೆ ಅಲ್ಲಿ ಆ ಮಟ್ಟಕ್ಕೆ ಇರುತ್ತೆ | ಅತಿಥಿಗೆ ಪತ್ನಿಯನ್ನು ಆ ರಾತ್ರಿ ಬಿಟ್ಟು ಕೊಟ್ಟು ಗಂಡ ಹೊರಗಡೆ ರೂಮಿನಲ್ಲಿ ಮಲಗಬೇಕು !!
ಅಲ್ಲೊಂದು ಜನಾಂಗದಲ್ಲಿ ಅತಿಥಿಯೊಬ್ಬ ತನ್ನ ನೆಂಟನ ಮನೆಗೆ ಹೋದರೆ ಆತನಿಗೆ ರಾಜಾತಿಥ್ಯ. ಒವಹಿಂಬಾ ಮತ್ತು ಒವಾಜಿಂಬಾ ಬುಡಕಟ್ಟು ಜನಾಂಗ ಅತಿಥಿಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಯಾರಾದರು ಅತಿಥಿಗಳು ಮನೆಗೆ ಬಂದಾಗ ‘ಒಕುಜೆಪಿಸಾ ಓಮುಕಾಜೆಂಡು’ ಎಂಬ ವಿಶಿಷ್ಟ ಆತಿಥ್ಯ ನೀಡುವ ಮೂಲಕ ಅವರನ್ನು ಸಂತೋಷ ಪಡಿಸಬೇಕು. ಅಂದರೆ ಮನೆಗೆ ಬಂದ ಅತಿಥಿಯನ್ನು ಖುಷಿಪಡಿಸುವುದು ಆತಿಥೇಯನ, ಅಂದರೆ ಮನೆಯೊಡೆಯನ ಕರ್ತವ್ಯ. ಒಳ್ಳೆಯ ಊಟ, ರುಚಿಯಾದ ಅಡುಗೆಯ ಊಟದ ನಂತರ ರಾತ್ರಿ ಮಲಗುವಾಗ ಕೂಡಾ ಮನೆಗೆ ಬಂದ ನೆಂಟನ ಇಷ್ಟಾನಿಷ್ಟಗಳನ್ನು ಈ ಜನಾಂಗ ಪರಿಗಣಿಸುತ್ತದೆ. ಅದಕ್ಕಾಗಿ ಮನೆಗೆ ಬಂದ ನೆಂಟನಿಗೆ ಆ ರಾತ್ರಿ ತನ್ನ ಪತ್ನಿಯನ್ನು ಆತ ಬಿಟ್ಟುಕೊಡಬೇಕು. ಆ ರಾತ್ರಿ ಮನೆಗೆ ಬಂದ ನೆಂಟ ಪತ್ನಿಯ ಜತೆ ಬೆಳಕು ಹರಿಯುವ ತನಕ ಸುಖಪಡಬಹುದು. ಅದಕ್ಕಾಗೇ, ಮನೆಯೊಡೆಯನು, ನೆಂಟ ಮತ್ತು ತನ್ನ ಪತ್ನಿಗೆ ರೂಮೊಂದನ್ನು ಬಿಟ್ಟು ಕೊಟ್ಟು ತಾನು ಬೇರೆ ಕೋಣೆಯಲ್ಲಿ ಮಲಗಬೇಕು. ಒಂದು ವೇಳೆ ಮನೆಯಲ್ಲಿ ಬೇರೆ ಕೋಣೆಗಳು ಇಲ್ಲದೆ ಹೋದರೆ, ಆಕೆಯ ಗಂಡ ಹೊರಗಡೆ ಮಲಗಬೇಕು. ಇದು ಒಂದು ಥರ ‘ ಬಂದುಂಡು ಮಲಗಿ ಹೋದ ‘ ಸಂಸ್ಕೃತಿ. ಈ ರೀತಿ ಪತ್ನಿಯನ್ನು ಮನೆಗೆ ಬಂದ ಗಂಡನಿಗೆ ಒಪ್ಪಿಸುವುದುರಿಂದ ಪರಸ್ಪರ ಕುಟುಂಬಗಳಲ್ಲಿ ಅಸೂಯೆ ಕಮ್ಮಿ ಆಗುತ್ತದೆ ಮತ್ತು ವಿಶ್ವಾಸ ಮೂಡುತ್ತದೆ !! ಒಟ್ಟಾರೆ ಅತಿಥಿಯಾಗಿ ಬಂದವ ಹೋಗುವಾಗ ತೃಪ್ತನಾಗಿ ಮರಳುವುದು ಗ್ಯಾರಂಟಿ !!!
ಇದು ಉತ್ತರ ನಮೀಬಿಯಾದ ಕುನೆನೆ ಮತ್ತು ಓಮುನಾಡಿ ಪ್ರದೇಶದಲ್ಲಿ ವಾಸಿಸುವ ಒವಹಿಂಬಾ ಮತ್ತು ಒವಾಜಿಂಬಾ ಬುಡಕಟ್ಟು ಜನಾಂಗ ಆಚರಿಸಿಕೊಂಡು ಬರುತ್ತಿರುವ ಒಂದು ಪದ್ಧತಿ. ಅವರು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿದ್ದು, ಅವರ ಇವರ ಆಚಾರ-ವಿಚಾರ ವಿಚಿತ್ರವಾಗಿದೆ. ಅವರ ಕೆಲವೊಂದು ವಿಚಾರ ನಡವಳಿಕೆಗಳು ನಮ್ಮನ್ನು ಅಚ್ಚರಿಗೆ ನೂಕುತ್ತದೆ.
ಸುಮಾರು 50 ಸಾವಿರದಷ್ಟು ಒವಹಿಂಬಾ ಮತ್ತು ಒವಾಜಿಂಬಾ ಬುಡಕ್ಟಟು ಜನಾಂಗ ವಾಸಿಸುತ್ತಿದ್ದಾರೆ. ಪುರುಷರು ಬೇಟೆಯಾಡಲು ತೆರಳುತ್ತಾರೆ. ಹೆಚ್ಚು ದಿನಗಳ ಕಾಲ ಬೇಟೆಯಲ್ಲೇ, ಮನೆಯ ಹೊರಗಡೆ ಸಮಯ ಕಳೆಯುತ್ತಾರೆ. ಮಹಿಳೆಯರು ಪ್ರತಿದಿನ ಮಕ್ಕಳ ಪಾಲನೆ ಪೋಷಣೆ ಮತ್ತು ಹಸುಗಳ ಹಾಲು ಕರೆಯುವುದು, ಇನ್ನಿತರ ಗೃಹ ಕೃತ್ಯದಲ್ಲಿ ತೊಡಗಿಕೊಳ್ಳುತ್ತಾರೆ.
ಈ ಜನಾಂಗದವರಲ್ಲಿ ಹುಡುಗಿಯರು ಪ್ರೌಢವ್ಯವಸ್ಥೆಗೆ ಬಂದಾಗ ತಂದೆ ಆಯ್ಕೆ ಮಾಡಿದ ಪುರುಷನನ್ನು ಹುಡುಗಿಯರು ವಿವಾಹವಾಗಬೇಕು. ಇಲ್ಲಿ ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಕಡಿಮೆ. ಪತಿಯ ಬೇಡಿಕೆಗೆ ಹೆಚ್ಚು ಮುಖ್ಯವಾಗುತ್ತದೆ. ಒವಹಿಂಬಾ ಮತ್ತು ಒವಾಜಿಂಬಾ ಜನಾಂಗದವರು ಕೆಂಪು ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಭೂಮಿ ಮತ್ತು ರಕ್ತವನ್ನು ಸೂಚಿಸುತ್ತದೆ ಎಂಬ ನಂಬಿಕೆ ಅವರದು.
ಅತಿ ಹೆಚ್ಚು ದನವನ್ನು ಹೊಂದಿದವರು ಧನಿಕ ವ್ಯಕ್ತಿಯೆಂದು ಇವರ ನಂಬಿಕೆ. ಒವಹಿಂಬಾ ಮತ್ತು ಒವಾಜಿಂಬಾ ಬುಡಕಟ್ಟು ಜನಾಂಗದಲ್ಲಿ ಬಹುಪತ್ನಿತ್ವವಿದೆ.
ಇವರಲ್ಲಿ ಮಹಿಳೆಯರು ಸ್ನಾನ ಮಾಡುವುದಿಲ್ಲ. ಇವರು ಸ್ನಾನ ಮಾಡುವುದು ನಿಷಿದ್ಧ. ಬದಲಿಗೆ ಹೊಗೆ ಹಾಕಿ ನಂತರ ಚರ್ಮದ ಮೇಲೆ ಕೆಂಪು ಬಣ್ಣವನ್ನು ಮತ್ತು ಆರೊಮ್ಯಾಟಿಕ್ ಅಂಟು ರಾಳಗಳನ್ನು ಹಚ್ಚಿಕೊಳ್ಳುತ್ತಾರೆ. ಈ ಕೆಂಪು ಬಣ್ಣ ಮತ್ತು ಮೈಮೇಲೆ ಹಚ್ಚಿಕೊಳ್ಳುವ ಲಾಳಗಳು ಮರುಭೂಮಿಯ ಶಕ್ತಿಯನ್ನು ಮತ್ತು ಸೊಳ್ಳೆಕಾಟವನ್ನು ನಿಯಂತ್ರಿಸಲು ಸಹಕಾರಿ. ಪರಿಮಳ ದ್ರವ್ಯಗಳನ್ನು ದೇಹಕ್ಕೆ ಲೇಪಿಸಿಕೊಳ್ಳುವ ಕಾರಣದಿಂದ ಸ್ನಾನ ಮಾಡದೇ ಇದ್ದರೂ ಅವರ ದೇಹ ಘಮಘಮಿಸುತ್ತದೆ. ಹೀಗೆ ತಮ್ಮ ವಿಚಿತ್ರ ಸಂಪ್ರದಾಯಗಳಿಂದ ಹಿಂಬ ಜನತೆ ಪ್ರಪಂಚದ ಗಮನ ಸೆಳೆದಿದೆ.