ಆಡಿಯೋದಲ್ಲಿ ಕಟೀಲ್ ಅವರದ್ದೇ ಧ್ವನಿ, ತನಿಖೆಯ ಅಗತ್ಯವಿಲ್ಲ – ಬಿಎಸ್‌ವೈ
ನಳಿನ್ ಕುಮಾರ್ ಕಟೀಲ್ ವೈರಲ್ ಆಡಿಯೋ: “ಇದು ಕಟೀಲ್ ಅವರ ಧ್ವನಿಯಾಗಿರುವುದರಿಂದ ತನಿಖೆಯ ಅಗತ್ಯವಿಲ್ಲ” ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಾನ್ಫಿಡೆಂಟ್ ಆಗಿ ಹೇಳಿದ್ದಾರೆ.
ಕೆಲದಿನಗಳ ಹಿಂದೆ ನಳಿನ್ ಕುಮಾರ್ ಅವರದದ್ದೆಂದು ಹೇಳಲಾದ ಆಡಿಯೋವೊಂದು ವೈರಲಾಗಿತ್ತು.
ಈ ಕುರಿತು ವೈರಲ್ ಆಗಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ, ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆಯುತ್ತೇನೆ. ಇದರ ಕುರಿತು ತನಿಖೆಯಾಗಬೇಕು. ನಂತರ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಹೇಳಿದ್ದರು.
ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ರವಿವಾರ ರಾತ್ರಿ ಏಕಾಏಕಿ ವೈರಲ್ ಆಗಿತ್ತು.
ಈ ಕುರಿತಂತೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ತಮ್ಮ ಆಪ್ತ ಸಚಿವರಲ್ಲಿ ಆಡಿಯೋದಲ್ಲಿ ಇರೋದು ಕಟೀಲ್ ಅವರದ್ದೆ ಧ್ವನಿ, ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ವೈರಲ್ ಆಡಿಯೋ: “ಇದು ಕಟೀಲ್ ಅವರ ಧ್ವನಿಯಾಗಿರುವುದರಿಂದ ತನಿಖೆಯ ಅಗತ್ಯವಿಲ್ಲ” ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ತುಳು ಭಾಷೆಯಲ್ಲಿ ಮಾತನಾಡಿದ್ದ ಈ ಆಡಿಯೋದ ಸತ್ಯಾಸತ್ಯತೆಯ ಬಗ್ಗೆ ತುಳು ಬಲ್ಲ ಮತ್ತು ಕಟೀಲ್ ಅವರ ಬಗ್ಗೆ ತಿಳಿದಿರುವ ಯಾರಿಗೂ ಅದು ಡೋಂಗಿ ಆಡಿಯೋ ಎಂಬ ಬಗ್ಗೆ ಅನುಮಾನವಿರಲು ಸಾಧ್ಯವಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದ್ರೆ