ಸೀಡಿ ಕಳಂಕಿತ ನರೇಶ್ ಗೌಡನಿಗೆ ಹುಟ್ಟೂರಲ್ಲಿ ತಳಿರು ತೋರಣ ಕಟ್ಟಿ ಅದ್ದೂರಿ ಸ್ವಾಗತ | ಕಾಂಗ್ರೆಸ್ ಸೇರ್ಪಡೆ ಬಗ್ಗೆ ಡಿಕೇಶಿ ಮೌನ !!
ತುಮಕೂರು, ಜುಲೈ 19: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಪ್ರಕರಣದಲ್ಲಿ ಕೇಳಿಬಂದಿದ್ದ, ಕಳಂಕಿತ ನರೇಶ್ ಗೌಡಗೆ ಯುವ ಕಾಂಗ್ರೆಸ್ ಮುಖಂಡ ಎಂಬ ಪಟ್ಟಕಟ್ಟಿ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಆಮೂಲಕ ಸಿಡಿಗೂ, ಲೇಡಿಯೋ ಡಿಕೇಶಿಗೂ ಸಂಪರ್ಕ ಬಟಾಬಯಲು.
ನರೇಶ್ ಗೌಡನ ಹುಟ್ಟೂರು ಶಿರಾದ ಭುವನಳ್ಳಿ. ನರೇಶ್ ಗೌಡ ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದ ನಂತರ ತಲೆಮರೆಸಿಕೊಂಡಿದ್ದ. ಬಳಿಕ ಇದೇ ಮೊದಲ ಬಾರಿಗೆ ಸ್ವಗ್ರಾಮಕ್ಕೆ ಬಂದಿದ್ದಾನೆ. ನರೇಶ್ ಗೌಡ ಗ್ರಾಮಕ್ಕೆ ಎಂಟ್ರಿಯಾಗುತ್ತಿದ್ದಂತೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ದೊರೆತಿದೆ. ಘನಂದಾರಿ ಕೆಲಸ ಮಾಡಿದವನಿಗೆ ಸನ್ಮಾನ ನೀಡದೆ ಇದ್ದರೆ ಹೇಗೆ. ಆ ಮೂಲಕ ಜನರ ಮನಸ್ಥಿತಿ ಅರ್ಥ ಆಗುತ್ತಿದೆ.
ಭುವನಹಳ್ಳಿಯಲ್ಲಿ ತಳಿರು ತೋರಣ ಕಟ್ಟಿ, ಪಟಾಕಿ ಸಿಡಿಸಿ, ಯುವ ಕಾಂಗ್ರೆಸ್ ಮುಖಂಡ ಎಂದು ಬ್ಯಾನರ್ ಹಾಕಲಾಗಿದೆ. ಈ ಬ್ಯಾನರ್ ನಲ್ಲಿ ಕಾಂಗ್ರೆಸ್ ಚಿಹ್ನೆ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರ ಭಾವಚಿತ್ರ ಬಳಸಿಕೊಳ್ಳಲಾಗಿದೆ. ನರೇಶ್ ಕಾಂಗ್ರೆಸ್ ಸೇರಿದ ವಿಷಯವನ್ನು ಡಿಕೆ ಶಿವಕುಮಾರ್ ಬಳಿ ಕೆಲ ಪತ್ರಕರ್ತರು ಪ್ರಸ್ತಾಪಿಸಿದ್ದರು. ಏನಂತ ಉತ್ತರ ಕೊಡುತ್ತಾರೆ ಡಿಕೆಶಿ ?! ಅದಕ್ಕಾಗಿ ಉತ್ತರಿಸಲು ನಿರಾಕರಿಸಿದ ಖಾಲಿ ಮಾಡಿದ್ದರು.