ಬೆಳ್ತಂಗಡಿ, ಕನ್ಯಾಡಿ | ರಬ್ಬರ್ ಗಿಡಕ್ಕೆ ನೇಣು ಕುಣಿಕೆ ಹಾಕಿಕೊಂಡು ಯುವಕ ಆತ್ಮಹತ್ಯೆ

ಗುರಿಪಳ್ಳ : ಇಲ್ಲಿಯ ಯುವಕನೋರ್ವ ಪಕ್ಕದ ರಬ್ಬರ್ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

 

ಇಲ್ಲಿನ ಗೋಳಿತೊಟ್ಟು ಮನೆಯ ನಾರಾಯಣ ಪೂಜಾರಿ ಯವರ ಪುತ್ರ ಕಾರ್ತಿಕ್ ಪೂಜಾರಿ(22) ಪಕ್ಕದ ರಬ್ಬರ್ ತೋಟದಲ್ಲಿ ರಬ್ಬರ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು, ಜು. 19 ರಂದು ಮುಂಜಾನೆ ಬೆಳಕಿಗೆ ಬಂದಿದೆ.

ರಾತ್ರಿ ಎಲ್ಲಾರೂ ಮನೆಯಲ್ಲಿ ಜೊತೆಯಾಗಿ ಊಟ ಮಾಡಿದ್ದರು. ಆಮೇಲೆ ಸಣ್ಣ ಪುಟ್ಟ ಬಿಸಿ ಬಿಸಿ ಮಾತುಕತೆ ನಡೆದಿದೆ ಎನ್ನಲಾಗಿದೆ. ನಂತರ ಎಲ್ಲರೂ ಮಲಗಿದ್ದರು.

ಈತ ಮನೆಯಿಂದ ಎಷ್ಟು ಹೊತ್ತಿಗೆ ಹೊರಹೋಗಿ, ಈ ಕೃತ್ಯ ಎಸಗಿದ್ದಾನೆ ಎಂದು ಯಾರಿಗೂ ತಿಳಿದಿಲ್ಲ. ಇಂದು ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾನೆ.

ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ. ಈ ಬಗ್ಗೆ ಬೆಳ್ತಂಗಡಿ ಆರಕ್ಷಕ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.