ವಿಶ್ವಹಿಂದು ಪರಿಷತ್ ನ ನೂತನ ರಾಷ್ಟ್ರಾಧ್ಯಕ್ಷರಾಗಿ ಖ್ಯಾತ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ರವೀಂದ್ರ ನಾರಾಯಿಣ್ ಸಿಂಗ್ ಆಯ್ಕೆ
ಖ್ಯಾತ ಮೂಳೆ ಶಸ್ತ್ರಚಿಕಿತ್ಸ ತಜ್ಞ ರವೀಂದ್ರ ನಾರಾಯಿಣ್ ಸಿಂಗ್ ಅವರು ಜು.17 ರಂದು ವಿಶ್ವಹಿಂದು ಪರಿಷತ್ ನ ನೂತನ ರಾಷ್ಟ್ರಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಿಹಾರದ ಮೂಲದವರಾದ ಸಿಂಗ್ ಅವರು ಪದ್ಮ ಶ್ರೀ ಪ್ರಶಸ್ತಿಗೂ ಭಾಜಾನರಾಗಿದ್ದು ಈ ವರೆಗೂ ಸಂಘಟನೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿತ್ತಿದ್ದರು. ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿನ ಅವರ ಸಾಧನೆಗೆ 2010ರಲ್ಲಿ ಪದ್ಮಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
“ಸಿಂಗ್ ಅವರನ್ನು ಸಂಘಟನೆಯ ರಾಷ್ಟ್ರಧ್ಯಕ್ಷರನ್ನಾಗಿ ಟ್ರಸ್ಟಿಗಳ ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ವಿಹೆಚ್ ಪಿಯ ಜಂಟಿ ಪ್ರಧಾನ ಕಾಯದರ್ಶಿ ಸುರೇಂದ್ರ ಜೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2018ರಿಂದ ವಿಹೆಚ್ ಪಿಯ ಅಧ್ಯಕ್ಷರಾಗಿದ್ದ ವಿಷ್ಣು ಸದಾಶಿವ್ ಕೂಕ್ಜೆ ಅವರಿಗೆ ಈಗ 82ವರ್ಷ. ಈ ಕಾರಣದಿಂದಾಗಿ ಅವರು ತಮ್ಮಜವಾಬ್ದಾರಿಯನ್ನು ಹೊಸಬರಿಗೆ ವಹಿಸಲು ನಿರ್ಧರಿಸಿದ್ದರು. ವಿಷ್ಣು ಸದಾಶಿವ ಕೂಕ್ಜೆ ಅವರ ಆಶಯದಂತೆ ಸಂವಿಧಾನ ಬದ್ಧವಾಗಿ ಚುನಾವಣೆ ನಡೆಸಿ ರವೀಂದ್ರ ನಾರಾಯಿಣ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವಿಹೆಚ್ ಪಿ ತಿಳಿಸಿದೆ.
ಸಿಂಗ್ ಖ್ಯಾತ ಮೂಳೆ ಶಸ್ತ್ರಚಿಕಿತ್ಸ ತಜ್ಞರಾಗಿದ್ದು ಸಾಮಾಜಿಕ, ವೈದ್ಯಕೀಯ, ಧಾರ್ಮಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಪ್ರಸಿದ್ಧಿ ಪಡೆದ್ದಾರೆ. ಇಂತಹ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂಘಟನೆಗೆ ಹೆಮ್ಮೆಯ ವಿಷಯ ಎಂದು ಜೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಚುನಾವಣೆ ನಡೆಡಿದ್ದು ಹಾಲಿ ಪ್ರಧಾನಕಾರ್ಯದರ್ಶಿ ಮಿಲಿಂದ್ ಪರಾಂಡೆ ಪುನರಾಯ್ಕೆಯಾಗಿದ್ದಾರೆ.