ಜುಲೈ 05 ಸೋಮವಾರದಿಂದ ರಾಜ್ಯಾದ್ಯಂತ ದೇವಸ್ಥಾನ ಸಹಿತ ಮಾಲ್ ಗಳು ಓಪನ್..ಅನ್ ಲಾಕ್ 3.0 ಹೊಸ ಮಾರ್ಗ ಸೂಚಿ ಹೊರಡಿಸಿದ ಮುಖ್ಯ ಮಂತ್ರಿ ಬಿ.ಎಸ್.ವೈ
ಮಹಾಮಾರಿ ಕೊರೋನ ಪಾಸಿಟಿವ್ ದರ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರನೇ ಹಂತದ ಅನ್ ಲಾಕ್ ಪ್ರಕ್ರಿಯೆಯ ಬಗ್ಗೆ ಇಂದು ಪತ್ರಿಕಾಗೋಷ್ಠಿಯ ಮೂಲಕ ಮಾಹಿತಿ ನೀಡಿದ್ದ ಸಿಎಂ ಯಡಿಯೂರಪ್ಪ, ರಾಜ್ಯಾದ್ಯಂತ ಇರುವ ವೀಕೆಂಡ್ ಕರ್ಪೂ ವನ್ನು ರದ್ದುಪಡಿಸಿ ಬೆಳಗ್ಗೆ ಗಂಟೆ 5ರಿಂದ ರಾತ್ರಿ 9ರವರೆಗೆ ಎಲ್ಲಾ ಅಂಗಡಿಗಳನ್ನು ತರೆಯಲು ಅವಕಾಶ ನೀಡಿದ್ದಾರೆ.
ಖಾಸಗಿ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ಶೇ100% ರಷ್ಟು ಜನರಿಗೆ ಪ್ರಯಾಣಕ್ಕೆ, ಮದುವೆಗಳಿಗೆ 100 ಮಂದಿಗೆ ,ಬಾರ್ ಗಳಿಗೆ ಹಾಗೂ ಮಾಲ್ ಗಳಿಗೆ ಸಹಿತ ಕ್ರೀಡಾಪಟುಗಳಿಗೆ ಮಾತ್ರ ಈಜುಕೊಳ ಬಳಸಲು ಅನುಮತಿ ಹಾಗೂ ದೇವಾಲಯಗಳಲ್ಲಿ ದರ್ಶನಕ್ಕೆ ಅನುಮತಿ ನೀಡಲಾಗಿದೆ.
ಇದರಂತೆ ಪಬ್ ಗಳಿಗೆ, ಥಿಯೇಟರ್ ಗಳು ಶಾಲಾ ಕಾಲೇಜು ಮುಚ್ಚುಗಡೆ ಮುಂದುವರೆದಿದೆ.
ಜುಲೈ 19 ರವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತದೆ. ಇದನ್ನು ಉತ್ತಮವಾಗಿ ಪಾಲಿಸಿದರೆ ಮುಂದುವರಿಸಲಾಗುವುದು, ಇಲ್ಲವಾದಲ್ಲಿ,ಜನರು ನಿರ್ಲಕ್ಷ್ಯ ತೋರಿದರೆ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ರಾಜ್ಯದ ಜನತೆಯನ್ನು ಎಚ್ಚರಿಸಿದ್ದಾರೆ.