ಆಂಧ್ರ ಪ್ರದೇಶದ ಕೃಷ್ಣಾ ಪಟ್ಟಣಂ ಆನಂದಯ್ಯ ಔಷಧ ಇದೀಗ ಕರ್ನಾಟಕದಲ್ಲಿ ಕೂಡ ಲಭ್ಯ

ಆಂಧ್ರಪ್ರದೇಶದ ನೆಲ್ಲೂರಿನ ಕೃಷ್ಣ ಪಟ್ಟಣಂ ಗ್ರಾಮದಲ್ಲಿ  ಆನಂದಯ್ಯ ಎಂಬ ಆಯುರ್ವೇದ ತಜ್ಞ ನೀಡುತ್ತಿದ್ದ ಕೃಷ್ಣ ಪಟ್ಟಣಂ ಔಷಧ ಇದೀಗ ಕರ್ನಾಟಕದಲ್ಲಿ ಕೂಡ ಲಭ್ಯವಿದೆ.

ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದಲ್ಲಿ ಈ ನಾಟಿ ಔಷಧಿಗಾಗಿ ಜನರು ಸಾಲುಗಟ್ಟಿ ನಿಂತು ಉಚಿತ ಔಷಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಸಾಲುಗಟ್ಟಿ ನಿಂತ ಜನರು ಸ್ಥಳೀಯ ಸ್ವಾಮೀಜಿ ಒಬ್ಬರ ಕೈಲಿ ಔಷಧ ಪಡೆಯುತ್ತಿದ್ದಾರೆ. ಸದರಿ ಸ್ವಾಮೀಜಿಯವರು ನೇರವಾಗಿ ಕೃಷ್ಣ ಪಟ್ಟಣಂ ಗೆ ತೆರಳಿ ಅಲ್ಲಿಂದ ಔಷಧಿಯನ್ನು ಪಡೆದುಕೊಂಡು ಬಂದು ಊರವರಿಗೆ ಹಂಚುತ್ತಿದ್ದಾರೆ. ಈ ಮದ್ದು ಕೋರೋನಾ ಬಾರದಂತೆ ತಡೆಯುವ ಲಸಿಕೆ ಅಲ್ಲ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುರ್ವೇದಿಕ ಔಷಧಿ ಯಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಸರಕಾರ ವಿತರಿಸುತ್ತಿರುವ ಲಸಿಕೆಯ ಜೊತೆಗೆ ಆಯುರ್ವೇದ ಮದ್ದನ್ನು ಕೂಡ ಸೇವಿಸಬಹುದು ಎಂದವರು ಹೇಳಿದ್ದಾರೆ.

ಕಳೆದ ಕೆಲವು ವಾರಗಳ ಹಿಂದೆ ಆಂಧ್ರಪ್ರದೇಶದ ಕೃಷ್ಣಾ ಪಟ್ಟಣಮ್ ಗ್ರಾಮದಲ್ಲಿ ಸ್ಥಳೀಯ ಆಯುರ್ವೇದ ಪ್ರಜ್ಞಾ ಆನಂದಯ್ಯ ಅವರ ಕೃಷ್ಣ ಪಟ್ಟಣಂ ಕೋರೋಣ ಔಷಧಿಗಾಗಿ ಜನ ಮುಗಿಬಿದ್ದಿದ್ದರು. ಅಲ್ಲಿ ಒಂದೇ ದಿನ 60 ಸಾವಿರ ಸಾಲುಗಟ್ಟಿ ನಿಂತು ಉಚಿತ ಔಷಧಿ ಖರೀದಿಗಾಗಿ ನಿಂತಿದ್ದರು. ಅದ್ರಿಂದ ದೇಶ ವಿದೇಶಗಳ ಗಮನ ನೆಲ್ಲೂರಿನ ಕೃಷ್ಣ ಪಟ್ಟಣಂ ಗ್ರಾಮದತ್ತ ಹರಿದಿತ್ತು.

ಆಂಧ್ರಪ್ರದೇಶದ ನೆಲ್ಲೂರಿನ ಕೃಷ್ಣಪಟ್ಟಣಂ ಹಳ್ಳಿಯಲ್ಲಿ ಕೊರೋನಾಕ್ಕೆ ಉಚಿತ ಔಷಧ ನೀಡಲಾಗುತ್ತದೆ ಎಂದು ಕೇಳಿ ಸಾವಿರಾರು ಜನ ಜಮಾಯಿಸುತ್ತಿದ್ದು ವಿಡಿಯೋ ಮತ್ತು ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇದು ಸರಕಾರದ ಗಮನಕ್ಕೆ ಬಂದು ಆಂಧ್ರಪ್ರದೇಶದ ಜಗನ್ಮೋಹನ್ ನೇತೃತ್ವದ ಸರಕಾರ ತಜ್ಞರನ್ನು ಆ ಔಷಧದ ಸುರಕ್ಷತೆ ಮತ್ತು ಅದರ ಔಚಿತ್ಯದ ಬಗ್ಗೆ ತಿಳಿದುಕೊಳ್ಳಲು ಕಳಿಸಿತ್ತು. ಆನಂದಯ್ಯ ಅವರು ನೀಡುತ್ತಿರುವ ಔಷಧದಲ್ಲಿ ಯಾವುದೇ ಕೆಟ್ಟ ಪರಿಣಾಮಗಳು ಇಲ್ಲದೆ ಅದು ವಿಶಿಷ್ಟ ಫಾರ್ಮ್ಯುಲೇಶನ ನಿಂದ ತಯಾರಾಗಿದೆ ಎಂದಿತ್ತು ತಜ್ಞರು ಕೊಟ್ಟ ವರದಿ. ಆದುದರಿಂದ ಕೃಷ್ಣ ಪಟ್ಟಣಂ ಮದ್ದಿನಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ಇದೀಗಾಗಲೇ ಸಾಬೀತಾಗಿದೆ.

Leave A Reply

Your email address will not be published.