ತನ್ನೊಂದಿಗೆ ಸಹಕರಿಸುವಂತೆ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿದ ನೀಚ ಪೊಲೀಸ್ ಅಧಿಕಾರಿ…ಸಹಕರಿಸಿದ ತಾಯಿ-ಚಿಕ್ಕಮ್ಮನ ಮೇಲೂ ಪ್ರಕರಣ ದಾಖಲು
ಶೃಂಗೇರಿಯಲ್ಲಿ ತಾಯಿ ತನ್ನ ಮಗಳನ್ನು 40 ಜನ ಕಾಮುಕರಿಗೆ ಕೊಟ್ಟ ಘಟನೆ ಮಾಸುವ ಮುನ್ನವೇ ಇನ್ನೊಂದು ಘಟನೆ ನಡೆದಿದೆ.ಕಾನೂನು ಕಾಪಾಡುವ, ದುಷ್ಟರಿಗೆ ಕಾನೂನಿನ ಅಡಿಯಲ್ಲಿ ಉತ್ತರ ನೀಡುವ ಜವಾಬ್ದಾರಿಯುತ ಅಧಿಕಾರಿಗಳ ಗುಂಪಿಗೆ ಕಪ್ಪು ಚುಕ್ಕೆ ಎಂಬಂತೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ನೀಚ ಕೆಲಸಕ್ಕೆ ಕೈ ಹಾಕಿದ್ದಾನೆ.
ತನ್ನ ಸುಖಕ್ಕೋಸ್ಕರ ಅಪ್ರಾಪ್ತ ಬಾಲಕಿಯೋರ್ವಳನ್ನು ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹರಿಸುವಂತೆ ಬೆದರಿಕೆ ಹಾಕಿರುವ ಬಗ್ಗೆ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಚೆನ್ನೈ ನ ಕಾಸಿಮೇಡು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಷರ್ ನ್ನು ಬಂಧಿಸಲಾಗಿದೆ. ಇದಕ್ಕೆ ಸಹಕರಿಸಿದ ಬಾಲಕಿಯ ತಾಯಿ ಹಾಗೂ ಚಿಕ್ಕಮ್ಮನ ಮೇಲೂ ಪ್ರಕರಣ ದಾಖಲಾಗಿದೆ.
ಘಟನಾ ವಿವರ :
ಆರೋಪಿ ಆಧಿಕಾರಿಯು ಬಾಲಕಿಯ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಅದೇ ವಿಚಾರವಾಗಿ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಆ ಮಹಿಳೆಯರು ಈತನಿಂದ ಸಾಕಷ್ಟು ಹಣವನ್ನು ಕೂಡಾ ಪಡೆದುಕೊಂಡಿದ್ದರು. ಈ ವೇಳೆಯಲ್ಲಿ ಮನೆಯಲ್ಲಿರುತ್ತಿದ್ದ ಬಾಲಕಿಯ ಮೇಲೆ ಹಲವಾರು ಸಾರಿ ಈತ ದೌರ್ಜನ್ಯ ಎಸಗಿದ್ದ.
ಈ ನಡುವೆ ಬಾಲಕಿಯ ತಂದೆ ಬೇರೆ ಕಡೆ ವಾಸವಿದ್ದರು. ಈತನ ಉಪಟಳ ತಾಳಲಾರದೆ ಬಾಲಕಿಯು ಸಂದರ್ಭ ಬಳಸಿಕೊಂಡು ಮನೆಯಿಂದ ತಪ್ಪಿಸಿಕೊಂಡು ಬಂದು ಮನೆಯಲ್ಲಿ ನಡೆಯುತ್ತಿರುವ ವಿಚಾರವನ್ನು ಎಳೆ ಎಳೆಯಾಗಿ ವಿವರಿಸಿದ್ದಾಳೆ. ಸದ್ಯ ತಾಯಿ- ಚಿಕ್ಕಮ್ಮ ಹಾಗೂ ಅಧಿಕಾರಿಯ ಲವ್ವಿ-ಡವ್ವಿ ಗೆ ಬ್ರೇಕ್ ಬಿದ್ದಿದೆ. ಇದೀಗ ಅಧಿಕಾರಿ, ತಾಯಿ ಮತ್ತು ಚಿಕ್ಕಮ್ಮನ ಮೇಲೆ ಪ್ರಕರಣ ದಾಖಲಾಗಿದೆ.