ಆಟವಾಡುತ್ತಿದ್ದಾಗ ಪಾತ್ರೆಯೊಳಗೆ ಸಿಲುಕಿದ ಮಗುವಿನ ತಲೆ | ಅಗ್ನಿಶಾಮಕ ದಳದ ನೆರವಿನಿಂದ ರಕ್ಷಣೆ

ಆಟವಾಡುತ್ತಿದ್ದ ಸಂದರ್ಭ ಸ್ಟೀಲ್ ಪಾತ್ರೆಯೊಳಗೆ ಮಗುವಿನ ತಲೆ ಸಿಲುಕಿಕೊಂಡು ಅದನ್ನು ತೆಗೆಯಲು ಒದ್ದಾಡಿದ ಘಟನೆ ವರದಿಯಾಗಿದೆ.

ಕಾಞಂಗಾಡು ತೈಕಡಪ್ಪುರ ನಿವಾಸಿ ನಫೀಸಾ ಎಂಬುವರ ಒಂದುವರೆ ವರ್ಷದ ಪುತ್ರ ಸೆಯೀಂಮಲಿಕ್ ಆಟವಾಡು ತ್ತಿದ್ದ. ಹಾಗೆ ಪಾತ್ರೆ ಪಗಡೆ ಇಟ್ಟುಕೊಂಡು ಆಟವಾಡುತ್ತಿದ್ದ ಮಗು ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿಕೊಂಡಿದ್ದಾನೆ. ಪಾತ್ರೆ ಅಲ್ಲೆ ಸಿಲುಕಿಕೊಂಡಿತ್ತು.

ಮನೆಯವರು ಮಗುವಿನ ತಲೆಯನ್ನು ಪಾತ್ರೆಯಿಂದ ಬಿಡಿಸಲು ಎಷ್ಟೇ ಪ್ರಯತ್ನಿಸಿದರೂ, ತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಏನು ಮಾಡಿದರು ಸಾಧ್ಯವಾಗದಿದ್ದಾಗ ಪಿಂಕ್ ಪೊಲೀಸರು ಬಂದು ಮನೆಯವರ ಜತೆ ಸೇರಿಕೊಂಡು ಮಗುವನ್ನು ಅಗ್ನಿಶಾಮಕ ದಳ ಕಚೇರಿಗೆ ಕೊಂಡೊಯ್ದರು. ಅಲ್ಲಿ ಯಂತ್ರದ ಸಹಾಯದಿಂದ ತುಂಬಾ ಜಾಗರೂಕತೆಯಿಂದ ಪಾತ್ರೆಯನ್ನು ತುಂಡರಿಸಿ ಮಗುವಿನ ತಲೆಯನ್ನು ಪಾತ್ರೆಯಿಂದ ತೆರವುಗೊಳಿಸಿದರು.

Leave A Reply

Your email address will not be published.