ಖಾಸಗಿ ಬಸ್ಸು ಈ ತಿಂಗಳು ರಸ್ತೆಗಿಳಿಯಲ್ಲ | 50 % ಜನ ತುಂಬಿಕೊಂಡು, 7 ದಿನ ಮಾತ್ರ ಓಡಿಸೋದಿಕ್ಕೆ ತಿಂಗಳ ಟ್ಯಾಕ್ಸ್ ಯಾಕ್ ಕಟ್ಲಿ ಅಂತಿದ್ದಾರೆ ಖಾಸಗಿ ಬಸ್ ಓನರ್ಸ್ !

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಜೂನ್ 23 ರಿಂದ ಜಾರಿಗೆ
ಬರುವಂತೆ ಹೊಸ ಮಾರ್ಗಸೂಚಿ ಜಾರಿಗೆ ಬರಲಿದ್ದು,
ಜಿಲ್ಲಾಡಳಿತ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ,
ಖಾಸಗಿ ಬಸ್ ಗಳನ್ನು ಜೂನ್ 30ರವರೆಗೆ ರಸ್ತೆಗಿಳಿಸುವುದಿಲ್ಲ
ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್
ಆಳ್ವ ಸ್ಪಷ್ಟನೆ ನೀಡಿದ್ದಾರೆ.

 

ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷರು ನೀಡಿರುವ ಸ್ಪಷ್ಟನೆ ಏನು?

ಜೂನ್ 30ರವರೆಗೆ ಖಾಸಗಿ ಬಸ್ ಓಡಿಸಲ್ಲ – ಬಸ್ ಮಾಲಕರ ಸಂಘದ ನಿರ್ಧಾರ ಮಾಡಿದೆ. ಜಿಲ್ಲಾಡಳಿತ ಏನೋ ಬಸ್ ಓಡಿಸಲು ಅನುಮತಿ ನೀಡಿದೆ. ಆದರೆ ನಾವು ನಾಳೆಯಿಂದ ಬಸ್ ಓಡಿಸೋದಿಲ್ಲ. ಜೂನ್ ತಿಂಗಳ ಕೊನೆ ತನಕ ಖಾಸಗಿ ಬಸ್ ಓಡಿಸಲ್ಲ.

ಈಗಿನ ಡೀಸೆಲ್ ರೇಟ್‌ನಲ್ಲಿ ಶೇ.50 ಪ್ರಯಾಣಿಕರನ್ನು ತುಂಬಿಸಬೇಕು. 7 ದಿನಕ್ಕೆ ಅರ್ಧ ಕೆಪ್ಯಾಸಿಟಿ ಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಹೋದರೆ ನಷ್ಟ ಖಚಿತ. ಈ ತಿಂಗಳಲ್ಲಿ ನಾಳೆಯಿಂದ 7 ದಿನ ಬಸ್ ಓಡಿಸಲು 1 ತಿಂಗಳ ಟ್ಯಾಕ್ಸ್ ಕಟ್ಟಬೇಕು ಇದು ಕಷ್ಟ ಸಾಧ್ಯ.

2 ತಿಂಗಳಿನಿಂದ ನಿಂತಿದ್ದ ಬಸ್‌ಗಳನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ ರಿಪೇರಿ ಮಾಡಬೇಕು. ಆನಂತರವಷ್ಟೇ ಬಸ್ಸುಗಳನ್ನು ರಸ್ತೆಗೆ ಇಳಿಸಲು ಸಾಧ್ಯ.

ಅಲ್ಲದೆ ನಗರದಾದ್ಯಂತ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಿದ್ದಾರೆ. ಅದು ಸರಿ ಆಗಬೇಕಿದೆ. ಇವೆಲ್ಲಾ ಕಾರಣಗಳಿಂದ ಖಾಸಗಿ ಬಸ್ಸುಗಳು ಜೂನ್ ತಿಂಗಳಿನಲ್ಲಿ ರಸ್ತೆಗಿಳಿಯುವುದಿಲ್ಲ. ಜುಲೈ ಒಂದರಿಂದ ಎಲ್ಲ ಬಸ್ಸುಗಳು ಕಾರ್ಯಾಚರಿಸಲಿದೆ ಎಂದು ಖಾಸಗಿ ಬಸ್ ಮಾಲಕರ ಸಂಘ ಹೇಳಿದೆ. ಖಾಸಗಿಯವರ ಸಮಸ್ಯೆ ಅರ್ಥಮಾಡಿಕೊಂಡು ಸರಕಾರ ಅವರಿಗೇನಾದರೂ ಡಿಸ್ಕೌಂಟ್ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.