ಜೂನ್ 23ಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದ ರಮೇಶ್ ಜಾರಕಿಹೊಳಿ…ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,ಪಕ್ಷ ತೊರೆಯಲಿದ್ದಾರೆಯೇ ಜಾರಕಿಹೊಳಿ?
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ,ಬಿ.ಜೆ.ಪಿ. ಸರ್ಕಾರ ರಚಯಲ್ಲಿ ಮಹತ್ತರ ಪಾತ್ರ ವಹಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡುವ ಬಗ್ಗೆ ಮಹತ್ತರ ಸುಳಿವೊಂದನ್ನು ನೀಡಿದ್ದಾರೆ.
ಅಷ್ಟೇ ಅಲ್ಲದೇ ಮಹಾರಾಷ್ಟ್ರ ನಾಯಕರ ಬಳಿ ತೆರಳಿದ್ದು,ತಮ್ಮ ನಾಯಕರ ವಿರುದ್ಧವೇ ತಿರುಗಿ ಬಿದ್ದು, ಮುಖ್ಯಮಂತ್ರಿ ಸ್ಥಾನ ಗಿಟ್ಟಸಿಕೊಳ್ಳಲೂ ಪ್ರಯತ್ನಿಸುತ್ತಿದ್ದಾರೆ ಎಂಬ ಗುಸುಗುಸು ಚರ್ಚೆಗಳು ಶುರುವಾಗಿದೆ.
ರಾಜ್ಯದಲ್ಲೇ ಭಾರೀ ಸದ್ದು ಮಾಡಿದ ಜಾರಕಿಹೊಳಿ ಸಿಡಿ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎಸ್ಐಟಿ ವಿಚಾರಣೆ ಎದುರಿಸಿ ಗೋಕಾಕ್ ನಲ್ಲಿ ಉಳಿದಿದ್ದರು. ಈ ನಡುವೆ ಸ್ಥಳೀಯವಾಗಿ ಕೋವಿಡ್, ಪ್ರವಾಹ ಮುಂತಾದವುಗಳನ್ನು ಎದುರಿಸುವ ಬಗೆಗೂ ಅಧಿಕಾರಿಗಳ ಜೊತೆ ಸಭೆಗಳನ್ನೂ ನಡೆಸಿದ್ದಾರೆ.
ಈ ನಡುವೆ ಜಾರಕಿಹೊಳಿ ಸಹೋದರರು ಅಭಿಪ್ರಾಯ ಸಂಗ್ರಹದಲ್ಲಿ ಯಾರ ವಿರುದ್ಧವೂ ಅಭಿಪ್ರಾಯವನ್ನು ಹೇಳದೆ ಪಕ್ಷದ ಹಿರಿಯರ ಜೊತೆ ತಮಗಾಗಿರೋ ನೋವನ್ನು ಹೇಳಿಕೊಂಡಿದ್ದರು. ಪಕ್ಷ ಹಾಗೂ ಸರ್ಕಾರ ನಡೆಸಿಕೊಂಡಿರೋ ರೀತಿಗೆ ಆಕ್ರೋಶ ವ್ಯಕ್ತ ಪಡಿಸಿ ಇದೇ ತಿಂಗಳು 23ಕ್ಕೆ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಹಾಗಾದರೆ ರಾಜ್ಯ ರಾಜಕಾರಣದಲ್ಲಿ ಸ್ಪರ್ಧೆಗಳಿವಿಯೇ, ಪಕ್ಷದ ಬಗೆಗೆ ಜಾರಕಿಹೊಳಿ ಮುನಿಸಲು ಕಾರಣವಾದರೂ ಏನು ಎಂಬುವುದು ರಾಜೀನಾಮೆಯ ಬಳಿಕವೇ ತಿಳಿಯಬೇಕಿದೆ.