ಪ್ರೀತಿ ನಿರಾಕರಿಸಿದ ಯುವತಿಯನ್ನು ಯದ್ವಾತದ್ವ ಇರಿದ ಪ್ರೇಮಿ,5 ತಿಂಗಳ ಒನ್ ಸೈಡ್ ಲವ್ ಕೊಲೆಯಲ್ಲಿ ಅಂತ್ಯ..ಘಟನೆಯಿಂದ ಯುವತಿ ಸಾವು,ಆರೋಪಿ ಪೊಲೀಸ್ ವಶಕ್ಕೆ

ತನ್ನನ್ನು ಪ್ರೀತಿಸಲು ನಿರಾಕರಿಸಿದಳೆಂದು ಪ್ರೇಮಿಯೊಬ್ಬ ತಾನು ಹುಚ್ಚರಂತೆ ಪ್ರೀತಿಸುತ್ತಿದ್ದ ಯುವತಿಯೊಬ್ಬಳನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿರುವ ಘಟನೆ ಮಲಪ್ಪುರಂ ಅಲ್ಲಿ ನಡೆದಿದೆ.

 

ಆರೋಪಿ ಪಿವೀಶ್ ಎಂಬಾತ ದೃಶ್ಯ ಎಂಬ ಯುವತಿಯನ್ನು ಬಹಳ ಸಮಯದಿಂದ ಪ್ರೀತಿಸುತ್ತಿದ್ದು,ಇದಕ್ಕೆ ಆಕೆ ಒಪ್ಪಿರಲಿಲ್ಲ. ಈತನ ಕಿರುಕುಳ ತಾಳಲಾರದೆ ಬೇಸತ್ತ ಆಕೆಯ ಪೋಷಕರು ಕಳೆದ ಏಪ್ರಿಲ್ ತಿಂಗಳಿನಲ್ಲಿ ಪೋಲಿಸ್ ಠಾಣೆಯಲ್ಲಿ ಆತನ ಮೇಲೆ ಕೇಸ್ ಕೂಡ ದಾಖಲಿಸಿದ್ದರು.

ಇದರಿಂದ ಕೋಪಗೊಂಡ ಆತ ತನ್ನ ಪ್ರೀತಿಗೆ ನಿರಾಕರಿಸಿದ ಆಕೆಯನ್ನು ಯದ್ವಾತದ್ವ ಇರಿದಿದ್ದಾನೆ.ಹೊಟ್ಟೆ, ಎದೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ 15 ಬಾರಿ ಇರಿದಿದ್ದು, ಅಷ್ಟು ಮಾತ್ರವಲ್ಲದೆ ತಡೆಯಲು ಬಂದ ಆಕೆಯ ಸಹೋದರಿಯನ್ನು ಕೂಡಾ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಆತ ಯುವತಿಯ ತಂದೆಯ ಒಡೆತನದ ಅಂಗಡಿಗೂ ಬೆಂಕಿ ಇಟ್ಟಿದ್ದಾನೆ. ಇದರಿಂದಾಗಿ ಭಾಗಶಃ ಅಂಗಡಿ ಹೊತ್ತಿ ಉರಿದಿದೆ.ಯುವತಿಯನ್ನು ಬಹಳ ಕ್ರೂರವಾಗಿ ಕೊಲ್ಲಲಾಗಿದೆ ಎಂದು ಮರಣೋತ್ತರ ವರದಿ ಹೇಳುತ್ತಿದ್ದರೆ, ಇತ್ತ ಮಗಳನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

Leave A Reply

Your email address will not be published.