ಕರ್ನಾಟಕ ಸಾರಿಗೆಯಲ್ಲಿ ಅಪಘಾತ ತಪ್ಪಿಸಲು ತಂತ್ರಜ್ಞಾನ ಅಳವಡಿಸುವ ಯೋಜನೆ…ಸಾರಿಗೆ ಸಂಸ್ಥೆಯ ಮಾಸ್ಟರ್ ಪ್ಲಾನ್ ಆದರೂ ಯಾವುದು?

ಸಾರಿಗೆ ನಿಗಮದಲ್ಲಿ ಇನ್ನು ಮುಂದೆ CWS & DDS ಎಂಬ ಎರಡು ತಂತ್ರಜ್ಞಾನದ ಬಳಕೆ ಮಾಡಲು ಸಂಸ್ಥೆಯು ಸಜ್ಜಾಗಿದೆ. ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತಾ ರಾಜ್ಯದ ತುಂಬೆಲ್ಲಾ ಓಡಾಡೋ ಕೆಎಸ್ಆರ್ಟಿಸಿ ಉತ್ತಮ ಸಾರಿಗೆ ವ್ಯವಸ್ಥೆ ಅನ್ನೋ ಹೆಮ್ಮೆ ರಾಜ್ಯದ ಜನರಿಗಿದೆ.

ಇಷ್ಟು ನಂಬಿಕೆಯ ವ್ಯವಸ್ಥೆಯಲ್ಲಿ ಯಾವುದೇ ಅನಾಹುತ, ರಸ್ತೆ ಅಪಘಾತಗಳು ಆಗದೇ ಇರಲಿ ಎಂಬ ಕಾರಣದಿಂದಾಗಿಯೇ ಸಂಸ್ಥೆಯು ಮಾಸ್ಟರ್ ಪ್ಲಾನ್ ಮಾಡಿದೆ.ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಬಸ್ಸು ಗಳಿಗೆ ಆರ್ಟಿಫೀಶಿಯಲ್ ಇಂಟಲಿಜನ್ಸ್ ಸೆನ್ಸಾರ್ ಅನ್ನು ಅಳವಡಿಸುತ್ತಿದೆ. ಇದರಲ್ಲಿ ಕೊಲಿಜನ್ ವಾರ್ನಿಂಗ್ ಸಿಸ್ಟಮ್ (CWS) ಹಾಗೂ ಡ್ರೈವರ್ ಡೋಸಿನೆಸ್ ಸಿಸ್ಟಮ್ (DDS) ಎಂಬ ಎರಡು ವಿಧದ ತಂತ್ರಜ್ಞಾನವಿರಲಿದ್ದು, ಬಸ್ ಮುಂಭಾಗ ಹಾಗೂ ಡ್ರೈವರ್ ಸೀಟ್ ಬಳಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಒಂದು ಕ್ಯಾಮರಾ ಸುತ್ತಲಿನ 150 ಮೀಟರ್ ಒಳಗೆ ನಿಗದಿತ ದೂರಕ್ಕಿಂತ ಹತ್ತಿರಕ್ಕೆ ವಾಹನ ಬಂದರೆ 6 ಸೆಕೆಂಡ್ ಒಳಗಾಗಿ ಹಾಗೂ ಮತ್ತೊಂದು ಕ್ಯಾಮರಾ ಡ್ರೈವರ್ ನಿದ್ದೆ ಮಂಪರಿನಲ್ಲಿದ್ರೆ ಸೈರನ್ ಮೂಲಕ ಶಬ್ದ ಮಾಡಿ ಎಚ್ಚರಿಕೆ ನೀಡಲಿದೆ. ಇಷ್ಟು ಮಾತ್ರವಲ್ಲದೆ ವಾರ್ನಿಂಗ್ ಜೊತೆ ಚಾಲಕರು ರೂಲ್ಸ್ ಫಾಲೋ ಮಾಡುತ್ತಿದ್ದಾರೆಯೇ ಎಂಬ ಮಾಹಿತಿಯೂ ಕಂಟ್ರೋಲ್ ರೂಂಗೆ ಹೋಗಲಿದೆ. ಆದಷ್ಟು ಬೇಗ ಈ ಯೋಜನೆಯು ಕಾರ್ಯರೂಪಕ್ಕೆ ತರುವ ಭರವಸೆಯನ್ನು ಸಂಸ್ಥೆಯು ನೀಡಿದೆ.

Leave A Reply

Your email address will not be published.