ಕಿಚ್ಚ ಸುದೀಪ್ ಮೋಸದಾಟ ಆಡಿ 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಜತೆ 1 ಪಂದ್ಯ ಗೆದ್ದರಾ ? | ಸಾಕ್ಷ್ಯಗಳು ಒಂದೊಂದಾಗಿ ಲಭ್ಯವಾಗುತ್ತಿವೆ !!

ನವದೆಹಲಿ: 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಕೊರೊನಾ ಪರಿಹಾರ ನಿಧಿ ಸಂಗ್ರಹಕ್ಕಾಗಿ ವಿವಿಧ ಸೆಲೆಬ್ರಿಟಿಗಳ ವಿರುದ್ಧ ಚೆಸ್ ಆಡುತ್ತಿದ್ದಾರೆ. ಅದೇ ರೀತಿ ಕನ್ನಡದ ನಟ ಕಿಚ್ಚ ಸುದೀಪ್ ಜೊತೆಗೂಡಿ ಆಡಿದ್ದರು. ಇದೀಗ ವಿವಾದವೊಂದಕ್ಕೆ ಕಾರಣವಾಗುತ್ತಿದೆ.

 

ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಟಪ್ ಫೈಟ್ ಕೊಟ್ಟು ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಜೊತೆ ಚೆಸ್ ಆಡಿ ಸೋತದ್ದು ಸುದ್ದಿಯಾಗಿತ್ತು. ಹವ್ಯಾಸಿ ಆಟಗಾರ ಕಿಚ್ಚ ಸುದೀಪ್, ಐದು ಬಾರಿಯ ವಿಶ್ವಚಾಂಪಿಯನ್ ನಿಗೆ ಫೈಟ್ ಕೊಡುವುದಾ ?! ತೆರೆಮರೆಯಲ್ಲಿ ಮುಸಿಮುಸಿ ನಕ್ಕಿದ್ದರು ಜನರು. ಪ್ರತಿಯೊಂದರಲ್ಲೂ ಹೀರೋಯಿಸಂ ತೋರಿಸುತ್ತಾ, ನಾನೊಬ್ಬ ಜೀನಿಯಸ್ ಎಂಬಂತೆ ಇತ್ತೀಚಿನ ದಿನಗಳಲ್ಲಿ ಬಿಂಬಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ್ ಬಗ್ಗೆ ಹಲವು ಅನುಮಾನಗಳು ಗುಸುಗುಸು ಅಲ್ಲಿ ಇಲ್ಲಿ ಹರಿದಾಡುತ್ತಿತ್ತು.
ಇದೀಗ ನಿಖಿಲ್ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಸಹ ಮೋಸದ ಆಟವಾಡಿರುವ ಬಗ್ಗೆ ಕೋಚ್ ಶ್ರೀನಾಥ್ ನಾರಾಯಣನ್ ಕೆಲವೊಂದಿಷ್ಟು ಸ್ಟೀನ್ ಶಾಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನುಮಾನ ನಿಜವಾಗಿರುವ ಎಲ್ಲ ಸಂಭವವೂ ಇದೆ.

ಅಚ್ಚರಿ ಏನೆಂದರೆ ಒಟ್ಟು 10 ಪಂದ್ಯಗಳ ಪೈಕಿ 1 ಪಂದ್ಯವನ್ನು ಹೊರತುಪಡಿಸಿ ಎಲ್ಲವನ್ನೂ ವಿಶ್ವನಾಥನ್ ಆನಂದ್ ಜಯಿಸಿದ್ದರು. ದಿಗ್ಗಜ ಆನಂದ್‌ನ್ನೇ ಹವ್ಯಾಸಿ ಆಟಗಾರ ಸೋಲಿಸಿದ ಬಗ್ಗೆ ಅಚ್ಚರಿ, ಮೋಸ ಮಾಡಿ ಗೆದ್ದಿರುವ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ನಿಖಿಲ್ ಕಾಮತ್, ಕಂಪ್ಯೂಟರ್ ಮತ್ತು ಇತರ ನೆರವಿನ ಮೂಲಕ ಆನಂದ್‌ರನ್ನು ಮಣಿಸಿದ್ದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.

ಇದೀಗ ಕೋಚ್ ಶ್ರೀನಾಥ್ ನಾರಾಯಣನ್, ಸುದೀಪ್ ಮತ್ತು ಸಾಜಿದ್ ಅವರ ಆಟವನ್ನು ಎಲ್ಲರೂ ಅನುಮಾನಿಸಿದ್ದಾರೆ. ಹಾಗಂತ ನಾನಿಲ್ಲಿ ನ್ಯಾಯಾಧೀಶನಲ್ಲ. ತೀರ್ಪುಗಾರನೂ ಅನ್ನು ಅಲ್ಲ. ಆಟದ ಸತ್ಯ ಬಯಲಾಗಿದೆ. ಸತ್ಯವು ಸ್ಪಷ್ಟವಾಗಿದೆ ಎಂದು ಬರೆದುಕೊಂಡು, ಸುದೀಪ್ ಮತ್ತು ನಾಡಿಯಾದ್ವಾಲಾ ಅವರ ಚೆಸ್‌ಮೇಟ್‌ನಲ್ಲಿನ ಖಾತೆಯನ್ನು ರದ್ದು ಮಾಡಿದ್ದಾರೆ.

https://mobile.twitter.com/nsrinath69/status/1404529789109628928/photo/2

Leave A Reply

Your email address will not be published.