ಸವಣೂರು: ಕೋವಿಡ್ ಬಾಧಿತ ಪ್ರದೇಶದಲ್ಲಿ ಎಸ್ ಡಿ ಪಿ ಐ ವತಿಯಿಂದ ಸ್ಯಾನಿಟೈಝಿಂಗ್
ಸವಣೂರು:.ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ವತಿಯಿಂದ ಕೋವಿಡ್ ಹಾಗೂ ಡೆಂಗ್ಯೂ ಬಾಧಿತ ಸ್ಥಳಗಳಲ್ಲಿ ಸ್ವಚ್ಛತೆ ಹಾಗೂ ಸೊಳ್ಳೆ ನಿರೋಧಕ ಸಿಂಪಡಣೆ ಕಾರ್ಯಕ್ರಮ ಸವಣೂರು ಎರಡನೇ ವಾರ್ಡ್ನಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ ಎ ನೇತೃತ್ವದಲ್ಲಿ ನಡೆಯಿತು.
ಸವಣೂರು ಪರಿಸರದಲ್ಲಿ ಡೆಂಗ್ಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಮನಗಂಡು ಜನನಿಬಿಢ ಪ್ರದೇಶಗಳಾದ ಮುಂಡತ್ತಡ್ಕ ಕಾಲನಿ, ಅಗರಿ, ಬಸ್ತಿಮೂಲೆ ಸೇರಿದಂತೆ ಸವಣೂರು ಸುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆ ನಿರೋಧಕ ಸಿಂಪಡಣೆ ಮಾಡುವ ಮೂಲಕ ಸಾರ್ವಜನಿಕರ ಶ್ಲಾಘಣೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ SDPI ಉಪಾಧ್ಯಕ್ಷರಾದ ಸುಲೈಮಾನ್ ಪಲ್ಲತಮೂಲೆ, ಅಶ್ರಫ್ ಪಣೆಮಜಲ್, ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಕೆನರಾ, ಎಸ್ ಡಿ ಪಿ ಐ ಸವಣೂರು ವಲಯಾಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿ, ಕಾರ್ಯದರ್ಶಿ ರಫೀಕ್ ಎಂ ಎಸ್, ನಝೀರ್ ಎಸ್ ಎಂ, ರಝಾಕ್ ಮಾಂತೂರು, ನಿಝಾರ್ ಆರಿಗಮಜಲ್ ಸಹಿತ ಹಲವು ಎಸ್ಡಿಪಿಐ ಕಾರ್ಯಕರ್ತರು ಭಾಗವಹಿಸಿದರು.