ಪಾನಿಪೂರಿ – ಗೋಲ್ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್ ಮಾಡಿದ ಹುಡುಗ | ಹೀಗೆ ಮಾಡಿದ್ರೆ ಯಾರೇ ಆದ್ರೂ ಬೀಳದೆ ಇರ್ತಾರಾ ?!
ಸೋಷಿಯಲ್ ಮೀಡಿಯಾದಲ್ಲಿ ಕೂಡ ಈಗ ಅಂಥದ್ದೊಂದು ವಿಶೇಷವಾಗಿ ಪ್ರಪೋಸ್ ಮಾಡಿದ ಸುದ್ದಿ ಹರಿದಾಡುತ್ತಿದೆ. ಹುಡುಗನೊಬ್ಬ ತನ್ನ ಪ್ರೇಯಸಿಗೆ ಯಾರು ಕೂಡ ಊಹಿಸಲಾಗದ ರೀತಿಯಲ್ಲಿ ಕ್ರಿಯೇಟಿವ್ ಆಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.
ಪ್ರೇಮಿಗಳಿಗೆ ತಮ್ಮ ಇನಿಯ ಅಥವಾ ಮನಸ್ಸು ಗೆದ್ದ ಮಹರಾಯ್ತಿ ಪ್ರಪೋಸ್ ಮಾಡಿದ ಗಳಿಗೆಯನ್ನು ಯಾರಾದರೂ ಮರೆಯಲಿಕ್ಕುಂಟೆ ? ಈ ದಿನಗಳಲ್ಲಿ ಹುಡುಗಿಯರು ಕೂಡ ಮೊದಲಿಗೆ ಪ್ರಪೋಸ್ ಮಾಡುವುದು ಕಂಡು ಬಂದರೂ, ಹೆಚ್ಚುಕಮ್ಮಿ ಮೊದಲು ಪ್ರಪೋಸ್ ಮಾಡುವ ಕೆಲಸ ಹುಡುಗರದ್ದು.
ತಾನು ಇಷ್ಟಪಟ್ಟ ಹುಡುಗಿ ತನ್ನನ್ನು ಕೂಡ ಇಷ್ಟ ಪಡುತ್ತಿದ್ದಾಳೆ ಎಂಬುದನ್ನು ಸೆನ್ಸ್ ಮಾಡಿದ ಹುಡುಗ ಹುಡುಗಿಗೆ ಪ್ರಪೋಸ್ ಮಾಡಲು ಹೊರಡುತ್ತಾನೆ. ಎಲ್ಲಿ ಮಾಡಲಿ, ಹೇಗೆ ಮಾಡಲಿ ಎಂದು ನೂರು ಸಲ ಯೋಚಿಸಿ ಕೊನೆಗೊಂದು ದಿನ ಗೊತ್ತು ಮಾಡಿಕೊಳ್ಳುತ್ತಾನೆ. ತಾನು ಮಾಡುವ ಪ್ರಪೋಸಲ್ ವಿಭಿನ್ನವಾಗಿರಬೇಕು, ಅದು ಆಕೆಗೆ ಖಂಡಿತವಾಗಿಯೂ ಇಷ್ಟ ಆಗಬೇಕು. ಖುಷಿಯಿಂದ ಫಳ ಫಳ ಹೊಳೆಯುವ ಆಕೆಯ ಅಂದವನ್ನು ಕಣ್ಣಿನಲ್ಲಿ ತುಂಬಿಕೊಳ್ಳಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತನ್ನ ಪ್ರಪೋಸಲ್ ಅನ್ನು ಆಕೆ ಒಪ್ಪಿಕೊಳ್ಳಬೇಕು. ಇದು ಪ್ರಪೋಸ್ ಮಾಡಲು ಹೊರಡುವ ಎಲ್ಲ ಯುವಕರ ಮೊದಲ ಬೇಡಿಕೆ.
ಹೀಗೇ ಹತ್ತಾರು ಭಾವನೆಗಳು ಧುಮ್ಮಿಕ್ಕಿ ನುಗ್ಗುವ ಆ ದಿನ, ಆತ ಪ್ರಪೋಸ್ ಮಾಡಿದ ದಿನ, ಆಕೆ ನಾಚಿ ಕೆಂಪಾಗಿ ತಲೆಯಾಡಿಸಿ ಸಮ್ಮತಿಸಿದ ದಿನ ಸದಾ ಪ್ರೇಮಿಗಳ ಮನಸ್ಸಿನಲ್ಲಿ ಅಜರಾಮರ.
ಅದೇ ಕಾರಣದಿಂದ ಪ್ರತಿಯೊಬ್ಬ ಪ್ರೇಮಿಯೂ ಡಿಫರೆಂಟ್ ಆಗಿ ಪ್ರಪೋಸ್ ಮಾಡಬೇಕು ಅಂದುಕೊಂಡಿರುತ್ತಾರೆ. ಎಲ್ಲರಿಗಿಂತಲೂ ವಿಭಿನ್ನವಾಗಿ ಪ್ರಪೋಸ್ ಮಾಡಿ ಮೆಚ್ಚುಗೆ ಪಡೆಯಬೇಕು, ಯಾವತ್ತೂ ಆ ದಿನ ಮರೆತು ಹೋಗಬಾರದು ಅಂದುಕೊಂಡಿರುತ್ತಾರೆ. ಹುಡುಗಿ ಅಥವಾ ಹುಡುಗ ಆ ಪ್ರಪೋಸ್ಗೆ ಬಿದ್ದೇ ಬೀಳಬೇಕು ಎಂಬ ಆಸೆಯೂ ಇರುತ್ತದೆ. ಅದಕ್ಕಾಗಿ, ಝೀರೋ ಪರ್ಸೆಂಟ್ ರಿಜೆಕ್ಷನ್ ಖಾತ್ರಿ ಮಾಡಿಕೊಂಡು ಪ್ರಪೋಸ್ ಮಾಡಬೇಕಿರುತ್ತದೆ.
ಮೊನ್ನೆ ಅಂತಹ ಒಬ್ಬ ಹುಡುಗ ಕಾಣಸಿಕ್ಕಿದ್ದ. ಪ್ರೀತಿಯ ಉತ್ಕಟತೆಯಲ್ಲಿ ಆಕೆಯನ್ನು ಒಲಿಸಿ ಕೊಳ್ಳಲೆಬೇಕೆಂದು ಆಕೆಗಾಗಿ ಒಂದು ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ಕೂಡ ಅಂಥದ್ದೊಂದು ವಿಶೇಷವಾಗಿ ಪ್ರಪೋಸ್ ಮಾಡಿದ ಕಥೆ ಹರಿದಾಡುತ್ತಿದ್ದು, ಅದರಿಂದ ನಮ್ಮ ಪ್ರೀತಿಯ ಹುಡುಗ-ಹುಡುಗಿಯರು ಸ್ಪೂರ್ತಿ ಹೊಂದುತ್ತಿದ್ದಾರೆ.
ಹುಡುಗನೊಬ್ಬ ತನ್ನ ಪ್ರೇಯಸಿಗೆ ಗೋಲ್ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್ ಮಾಡಿದ್ದಾನೆ. ಈ ಘಟನೆಯನ್ನು ತಿಳಿದ ನೆಟ್ಟಿಗರು ಒಂದು ಕ್ಷಣ ಚಕಿತ ! ಬಳಿಕ, ಈ ವಿಧಾನದಲ್ಲಿ ಪ್ರಪೋಸ್ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಗರ್ಲ್ಫ್ರೆಂಡ್ಗೆ ಇದಕ್ಕಿಂತ ವಿಶೇಷವಾಗಿ ಪ್ರಪೋಸ್ ಮಾಡೋಕೆ ಹೇಗೆ ತಾನೇ ಸಾಧ್ಯ ಎಂದುಕೊಂಡಿದ್ದಾರೆ.
ಪಾನಿಪೂರಿ ಯಾರಿಗೆ ಇಷ್ಟವಿಲ್ಲ ಹೇಳಿ? ಹುಡುಗಿಯರಿಗಂತೂ ಪಾನಿಪುರಿ ಎಂದರೆ ಜೀವ. ಇಷ್ಟಗಲ ಬಾಯಗಲಿಸಿ, ತುಸುವೇ ಆಕಾಶ ನೋಡಿ ಮೆಲ್ಲಗೆ ಗೋಲ್ ಗುಪ್ಪ ಬಾಯೊಳಗೆ ತುರುಕಿ ಸಂಭ್ರಮಿಸದೆ ಹೋದರೆ ಆಕೆಯ ಆ ವಾರ ವ್ಯರ್ಥ. ತನ್ನ ಹುಡುಗಿಗೆ ಪಾನಿಪುರಿ ಇಷ್ಟ ಎಂದೇ,ಈ ಹುಡುಗ ಪಾನಿಪುರಿ ಗೋಲ್ ಗುಪ್ಪದಲ್ಲಿ ರಿಂಗ್ ಇಟ್ಟು ಆಕೆಗೆ ಪ್ರೊಪೋಸ್ ಮಾಡಿದ್ದು. ತುಂಟ ಹುಡುಗಿಯಂತೂ ಕ್ಲೀನ್ ಬೌಲ್ಡ್ !!
ಈಗಾಗಲೇ ಪ್ರಪೋಸ್ ಮಾಡಿ ತನ್ನ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಂಡವರು, ‘ ಛೇ, ನಂಗ್ಯಾಕೆ ಐಡಿಯಾ ಹೊಳೆಯಲಿಲ್ಲ ?’ ಎಂದು ಬೇಜಾರು ಪಟ್ಟುಕೊಂಡಿದ್ದಾರೆ.
ಇನ್ನೇನು ಇವತ್ತು ನಾಳೆ ಪ್ರಪೋಸ್ ಮಾಡುವ ಹೊಸ್ತಿಲಲ್ಲಿ ನಿಂತವರು, ಈ ಪ್ರಪೋಸಲ್ ನಿಂದ ಒಂದಷ್ಟು ಸ್ಫೂರ್ತಿ ಹೊಂದಿ ವಿಭಿನ್ನವಾಗಿ ಯೋಚಿಸಲು ತೊಡಗಿದ್ದಾರೆ.
ಅತ್ತ ಹುಡುಗಿಯರು, ಆ ಬಾಯ್ಫ್ರೆಂಡ್ ಸೂಪರ್ ಆಗಿ ಪ್ರಪೋಸ್ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹಲವರು ಹೇಳಿದ್ದಾರೆ. ಒಬ್ಬಾಕೆ ಹೀಗೆ ಬರೆದಿದ್ದಾಳೆ.
i mean,, can’t say no to pani puri
Gol gappay or pani puri are enjoyed by everyone and they are a real treat. But none of us would have imagined getting proposed through gol gappay. This man is doing things differently and after bizarre food proposals, pic.twitter.com/OwvGFc1Jd4
— MonthlyAndazeJahan (jiddat group of publications) (@e_monthly) June 3, 2021
ಇಷ್ಟೊಂದು ವಿಭಿನ್ನವಾಗಿ ಪ್ರಪೋಸ್ ಮಾಡಿರುವ ಹುಡುಗನ ಬಗ್ಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಹೀಗೆ ಹುಡುಗನನ್ನು ಹೊಗಳಿರುವ ಕಮೆಂಟ್ಗಳೇ ತುಂಬಿ ತುಳುಕುತ್ತಿವೆ. ಹಲವರು ಈ ಪೋಸ್ಟ್ನ್ನು ಶೇರ್ ಮಾಡಿಕೊಂಡಿದ್ದಾರೆ.
ಎಲ್ಲರಿಗೂ ತಮ್ಮ ಹುಡುಗಿಗೆ ಹೊಸಾ ಥರ ಪ್ರಪೋಸ್ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಎಲ್ಲರಿಗೂ ಹೀಗೆ ಹೊಸ ಉಪಾಯ ಹೊಳೆದಿರುವುದಿಲ್ಲ. ಕೆಲವು ದಿನಗಳ ಹಿಂದೆ ಹುಡುಗನೊಬ್ಬ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಪೋಸ್ ಮಾಡಿದ್ದ. ಹಿಪ್ಪೊಪೊಟಮಸ್ ಸಮ್ಮುಖದಲ್ಲಿ ಹುಡುಗ, ಹುಡುಗಿಗೆ ಉಂಗುರ ತೊಡಿಸಿದ್ದ. ಈ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನು ಓದಿದ ಪ್ರತಿಯೊಬ್ಬರ ಪ್ರೇಮವೂ ಫಲಿಸಾಲಿ. ನೀವೂ ಈಗಾಗಲೇ ವಿಭಿನ್ನವಾಗಿ ಪ್ರಪೋಸ್ ಮಾಡಿ ಆಕೆಯನ್ನು ಬೀಳಿಸಿಕೊಂಡಿದ್ದರೆ ನಮಗೆ ಬರೆದು ವಾಟ್ಸಪ್ ಮಾಡಿ. ಯಾರಿಗೆ ಗೊತ್ತು ಇದಕ್ಕಿಂತಲೂ ಚೆಂದದ ಪ್ರಪೋಸಲ್ ನಿಮ್ಮದಾಗಿರಬಹುದು.
ventolin sale uk: Ventolin inhaler – can you buy ventolin over the counter in uk
where to buy ventolin nz
lasix furosemide: buy furosemide – furosemide 100 mg
india pharmacy mail order: Indian pharmacy international shipping – indianpharmacy com
top 10 online pharmacy in india: indian pharmacy – india pharmacy mail order