ಕಚ್ಚಿದ ಕೋಬ್ರಾ ಹಾವನ್ನು ಹುಡುಕಿ ಹಿಡಿದು ಹಾವಿನ ಜತೆ ಆಸ್ಪತ್ರೆಗೆ ಬಂದ ಭೂಪ !
ಬಳ್ಳಾರಿ: ತನಗೆ ಕಚ್ಚಿದ ಕೋಬ್ರಾ ಹಾವನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಸಾಮಾನ್ಯವಾಗಿ ಮನುಷ್ಯರಿಗೆ ಹಾವು ಕಚ್ಚಿದರೆ ಅದು ವಿಷದ ಹಾಗಿದ್ದರೆ ಎದ್ದನೋ ಬಿದ್ದನೋ ಅಂತ ಆಸ್ಪತ್ರೆಯತ್ತ ದೌಡಾಯಿಸುವುದು ಸಾಮಾನ್ಯ.
ಆದರೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ನಾಗರ ಹಾವು ಕಚ್ಚಿದೆ. ತನಗೆ ಹಾವು ಕಚ್ಚಿದ ಕೂಡಲೇ ಆಸ್ಪತ್ರೆಗೆ ತೆರಳುವುದನ್ನು ಬಿಟ್ಟು, ತನಗೆ ಕಚ್ಚಿದ ಹಾವು ಹುಡುಕಾಡಿದ್ದಾರೆ. ಹಾವು ಹುಡುಕಿ, ನಂತರ ಅದನ್ನು ಹಿಡಿದು ತದನಂತರ ಆತ ಆಸ್ಪತ್ರೆಗೆ ಸಾಗಿದ್ದಾನೆ.
ಉಪ್ಪಾರಹಳ್ಳಿ ಗ್ರಾಮದ ಕಾಡಪ್ಪ ಎಂಬ ಯುವಕನೇ ಹಾಗೆ ಹಾವು ಕಚ್ಚಿಸಿಕೊಂಡು ಆಸ್ಪತ್ರೆಗೆ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಬಂದ ಭೂಪ. ಇದೀಗ ಆತ ಹಾವು ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದ ಆ ವಿಡಿಯೊ ವೈರಲ್ ಆಗಿದೆ.
ತನಗೆ ಔಷಧಿ, ಇಂಜೆಕ್ಷನ್ ಪಡೆಯಲು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವಾಗ ಹಾವನ್ನೂ ಹಿಡಿದುಕೊಂಡು ಹೋದ ಕಾಡಪ್ಪನ ಕೈಯಲ್ಲಿ ಹಾವನ್ನು ನೋಡಿದ ಜನರು ಹೌಹಾರಿದ್ದಾರೆ.
ಹಾವನ್ನು ಕಾಡಿಗೆ ಬಿಡಲಾಗಿದೆ. ಬಳ್ಳಾರಿಯ ವಿಮ್ಸ್ ನಲ್ಲಿ ಕಾಡಪ್ಪನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸುಳ್ಯ ತಾ.ನ ಐವರ್ನಾಡು, ಅಮರಮುಡ್ನೂರು, ಕೊಲ್ಲಮೊಗ್ರ, ಗುತ್ತಿಗಾರು, ಅರಂತೋಡು, ಸುಬ್ರಹ್ಮಣ್ಯ ಗ್ರಾ. ಪಂ. ವ್ಯಾಪ್ತಿಯಲ್ಲಿ ಸಂಪೂರ್ಣ ,ಲಾಕ್‌ಡೌನ್ ಮಾಡಲು ಜಿಲ್ಲಾಧಿಕಾರಿ ಆದೇಶ