ಪುತ್ತೂರು- ಕಡಬ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ 85 ಸಾವಿರ ರೂ. ಮೌಲ್ಯದ ದಿನಸಿ ಕಿಟ್ ವಿತರಣೆ

ಪುತ್ತೂರು: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ಮತ್ತು ಕಡಬ ತಾಲೂಕಿನ ಶಾಖಾ ಶಿಕ್ಷಕರ ಸಂಘದ ವತಿಯಿಂದ ಕೋವಿಡ್ ಸಂಕಷ್ಟದಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ಆಹಾರದ ಕಿಟ್‌ಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಅವರು ತಾ.ಪಂ. ಸಭಾಂಗಣದಲ್ಲಿ ಚಾಲನೆ ನೀಡಿದರು.

ವೃತ್ತಿ ಧರ್ಮದ ಜೊತೆ ಸಂಕಷ್ಟಕ್ಕೆ ಸ್ಪಂಧಿಸುವ ಕಾರ್ಯ ಮಹತ್ವದ್ದು

ಶಾಸಕ ಸಂಜೀವ ಮಠಂದೂರು ಅವರು ಸಾಂಕೇತಿಕವಾಗಿ ಆಹಾರದ ಕಿಟ್‌ಗಳನ್ನು ವಿತರಿಸಿದ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಬದುಕನ್ನು ಎದುರಿಸುವ ಸಂದರ್ಭದಲ್ಲಿ ಎಲ್ಲರನ್ನು ಗೌರವಿಸುವ ಕಾರ್ಯ ಈ ಸಮಾಜದಿಂದ ಆಗಬೇಕು. ಆ ಕೆಲಸವನ್ನು ದೈಹಿಕ ಶಿಕ್ಷಣ ಶಿಕ್ಷಕರು ಮಾಡುತ್ತಿರುವುದು ಉತ್ತಮ ವಿಚಾರ. ತಮ್ಮ ವೃತ್ತಿ ಧರ್ಮ ಪಾಲನೆ ಮಾಡುವ ಜೊತೆಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂಧಿಸಿದಾಗ ಶಿಕ್ಷಕರನ್ನು ಇಡೀ ಸಮಾಜ ಗೌರವಿಸುತ್ತದೆ ಎಂದರು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ,ದೈಹಿಕ ಶಿಕ್ಷಣ ಶಿಕ್ಷಕರು ಕೋವಿಡ್ ಕಾಲದಲ್ಲಿ ಅಶಕ್ತರ ನೆರವಿಗೆ ನಿಂತಿರುವುದು ಮಾದರಿ ಕಾರ್ಯ ಎಂದರು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ,ನಗರಸಭೆಯ ಅಧ್ಯಕ್ಷ ಕೆ ಜೀವಂಧರ್ ಜೈನ್, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೊರ್ಮಂಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನವೀನ್ ವೇಗಸ್, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮೊನಪ್ಪ ಪಟ್ಟೆ, ಕಡಬ ತಾಲೂಕಿನ ಅಧ್ಯಕ್ಷ ಮಾಮಚ್ಚನ್,ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ದೈಹಿಕ ಶಿಕ್ಷಣ ಶಿಕ್ಷಕ ಕಾರ್ಯವನ್ನು ಶ್ಲಾಘೀಸಿದರು.

ಕ್ರೀಡಾನಿಧಿಯನ್ನು ಖಾಸಗಿ ಶಿಕ್ಷಕರಿಗೆ ಬಳಸುವಂತೆ ವಿನಂತಿ
ರಾಜ್ಯಮಟ್ಟದಲ್ಲಿ ಕ್ರೀಡಾ ನಿಧಿಯಿದೆ. ಆದರೆ ಕಳೆದ 2 ವರ್ಷಗಳಿಂದ ಕ್ರೀಡಾಕೂಟಗಳನ್ನು ಸಮರ್ಪಕವಾಗಿ ಮಾಡಲಾಗದೆ ಕ್ರೀಡಾ ನಿಧಿಯ ಬಳಕೆಯಾಗಿಲ್ಲ. ಈ ನಿಟ್ಟಿನಲ್ಲಿ ಕ್ರೀಡಾ ನಿಧಿಯನ್ನು ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ವೇತನಕ್ಕೆ ಬಳಸುವಂತೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಡಬ ತಾಲೂಕಿನ ಸಂಘದ ಅಧ್ಯಕ್ಷ ಮಾಮಚ್ಚನ್ ಅವರು ಸರಕಾರದ ಜೊತೆ ಸಮಾಲೋಚನೆ ನಡೆಸುವಂತೆ ಶಾಸಕರಲ್ಲಿ ವಿನಂತಿಸಿದರು.

ಸಂಘದ ಕೋಶಾಧಿಕಾರಿ ಮೋಹನ್ ಪೆರಿಯಡ್ಕ, ಪದಾಧಿಕಾರಿ ವನಿತಾ ಮುಂಡೂರು, ಸಿಆರ್‌ಪಿ ಸ್ಟ್ಯಾನಿಪ್ರವೀಣ್, ಬಾಲಕೃಷ್ಣ ರೈ ಒಂತನಡ್ಕ, ಸೀತಾರಾಮ ಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ, ಚಂದ್ರಶೇಖರ್, ವಿಶ್ವೇಶ್ವರ ಭಟ್, ನಯನಾ ವಿ ರೈ, ಜಯರಾಮ ಗೌಡ, ಸೇರಿದಂತೆ ಹಲವಾರು ಮಂದಿ ಉಪಸ್ಥತಿರಿದ್ದರು. ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಸ್ವಾಗತಿಸಿ, ಪುತ್ತೂರು ತಾಲೂಕು ಸಂಘದ ಕಾರ್ಯದರ್ಶಿ ಶ್ರೀಲತಾ ವಂದಿಸಿದರು.

ಸಂಘದ ಮಾಜಿ ಕಾರ್ಯದರ್ಶಿ ಪ್ರವೀಣಾ ರೈ ಕಾರ್ಯಕ್ರಮ ನಿರೂಪಿಸಿದರು.

ರೂ.85 ಸಾವಿರ ಮೌಲ್ಯದ ಆಹಾರದ ಕಿಟ್‌ಗಳು
ಕೇವಲ ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ ರವಾನೆಗೆ ದೈಹಿಕ ಶಿಕ್ಷಣ ಶಿಕ್ಷಕರ ಸ್ಪಂಧನೆ ಉತ್ತಮವಾಗಿದೆ. ಸುಮಾರು 70 ಮಂದಿ ದೈಹಿಕ ಶಿಕ್ಷಣ ಶಿಕ್ಷರು ತಮ್ಮ ಶಾಲಾ ವ್ಯಾಪ್ತಿಯಲ್ಲಿ ತುಂಬಾ ಸಂಕಷ್ಟದಲ್ಲಿರುವ ಕುಟುಂಬವನ್ನು ಗುರುತಿಸಿ 85 ಫಲಾನುಭವಿಗಳಿಗೆ ಒಟ್ಡು ರೂ.85 ಸಾವಿರ ಮೌಲ್ಯದ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು. ಸಾಂಕೇತಿಕವಾಗಿ ವಿತರಣೆಯ ಬಳಿಕ ಉಳಿದ ಫಲಾನುಭವಿಗಳಿಗೆ ಮನೆ ಮನೆ ತೆರಳಿ ಆಹಾರದ ಕಿಟ್ ವಿತರಣೆ ಮಾಡಲಾಗುವುದು,ಯಾವುದೇ ಸಭೆ ಸೇರದೆ ಸಾಮಾಜಿಕ ಜಾಲತಾಣದ ಮೂಲಕ ಸಂವಹನ ನಡೆಸಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮೋನಪ್ಪ ಪಟ್ಡೆ , ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ತಿಳಿಸಿದ್ದಾರೆ.

Leave A Reply

Your email address will not be published.