12 ಗಂಟೆಗಳ ಕಾಲ ತೌಕ್ತೆ ಚಂಡಮಾರುತದ ಅಲೆಗಳೊಂದಿಗೆ ಹೋರಾಡಿ ದಡ ಸೇರಿದ ಯುವಕ |ಹಿಂದೂ ಜಾಗರಣ ವೇದಿಕೆ ವಿಟ್ಲ ವತಿಯಿಂದ ಸನ್ಮಾನ ಕಾರ್ಯಕ್ರಮ
ಆತ್ಮ ಸ್ಥೈರ್ಯವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ.ವೃತ್ತಿ ಜೀವನದಲ್ಲಿ ಧೈರ್ಯಶಾಲಿಯ ಪಾತ್ರ ನಿಭಾಯಿಸುವುದು ಸುಲಭ. ಆದರೆ ತಮ್ಮ ನಿಜ ಜೀವನದಲ್ಲಿ ಧೈರ್ಯಶಾಲಿಗಳು ಬೆರಳೆಣಿಕೆಯಷ್ಟೇ.
ಆದರೆ ತುಳುನಾಡಿನ ಈ ಯುವಕ ತನ್ನ ನಿಜ ಜೀವನದಲ್ಲಿ ಹಲವರಿಗೆ ಹೀರೋ ಆಗಿಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಕರಾವಳಿಗೆ ಅಪ್ಪಳಿಸಿದ ತೌಕ್ತೇ ಚಂಡಮಾರುತ, MRPL (Ongc) ಸಂಸ್ಥೆಯ ಬಾಂಬೆಯಲ್ಲಿ ಸಮುದ್ರದಲ್ಲಿ ಬಾರ್ಜ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನರಿಕೊಂಬು ಮಾರುತಿನಗರ ನಿವಾಸಿ ಕೃಷ್ಣಪ್ಪ ಮೂಲ್ಯರವರ ಪುತ್ರ ಸಾಹಸಿ, ಧೈರ್ಯಶಾಲಿ ಯುವಕ ಬಂಟ್ವಾಳದ ಸುಕುಮಾರ್ ಎಂಬವರು ಸತತ 12 ಘಂಟೆ ಕಾಲ ಜಾಕೆಟ್ ಧರಿಸಿ ಸಮುದ್ರದ ಅಲೆಗಳೊಂದಿಗೆ ಹೋರಾಡಿ,ಈಜಿ ದಡಸೇರಿ ಪವಾಡ ಸದ್ರುಷವೆಂಬತೆ ಬದುಕುಳಿದಿದ್ದಾರೆ.
ಇವರ ಧೈರ್ಯವನ್ನು ಕಂಡು ಮನೆ ಮಂದಿ ನಿಬ್ಬೆರಗಾಗುವುದರೊಂದಿಗೆ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಸನ್ಮಾನ ಕಾರ್ಯಕ್ರಮವೂ ನಡೆಯಿತು ಈ ಕಾರ್ಯಕ್ರಮದ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ವಿಭಾಗ ಸಂಪರ್ಕ ಪ್ರಮುಖ ರತ್ನಾಕರ ಶೆಟ್ಟಿ ಕಲ್ಲಡ್ಕ, ಜಿಲ್ಲಾ ಹೋರಾಟ ಪ್ರಮುಖ್ ನರಸಿಂಹ ಶೆಟ್ಟಿ ಮಾಣಿ, ಜಿಲ್ಲಾ ಕಾರ್ಯದರ್ಶಿ ಚಂದ್ರ ಕಲಾಯಿ, ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಶ್ರೇಯಸ್ ವಾಮದಪದವು, ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷ ಗಣೇಶ್ ಕುಲಾಲ್ ಕೆದಿಲ, ಪ್ರಧಾನ ಕಾರ್ಯದರ್ಶಿ ಅರುಣ್ ಕುಲಾಲ್ ಸಜಿಪ, ತಾಲೂಕು ಹೋರಾಟ ಪ್ರಮುಖ್ ವಿಜೇಶ್ ನಾಯ್ಕ್.., ಕಾರ್ಯದರ್ಶಿ ಪ್ರಶಾಂತ್, ನಿಧಿ ಪ್ರಮುಖ ಕಿರಣ್, ಮತ್ತಿತರರು ಉಪಸ್ಥಿತರಿದ್ದರು.