ಕಡಬ ಪೇಟೆಯಲ್ಲಿ ಕೆಲವು ದಿನಗಳಿಂದ ಸುತ್ತಾಡುತ್ತಿದ್ದ ಅಸಹಾಯಕ ಮಹಿಳೆಗೆ ಸೇವಾ ಭಾರತಿಯಿಂದ ಆಸರೆ…ಸುರಕ್ಷಿತವಾಗಿ ಸೇವಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಕಾರ್ಯಕ್ಕೆ ಸುರಿಯುತ್ತಿದೆ ಮೆಚ್ಚುಗೆಯ ಸುರಿಮಳೆ

ಅಸಹಾಯಕ ಮಾನಸಿಕ ಮಹಿಳೆಗೆ ಆಸರೆ.

 


ಕಳೆದ ಕೆಲವು ದಿನಗಳಿಂದ ದ.ಕ ಜಿಲ್ಲೆಯ ಕಡಬ ಸುತ್ತಲಿನ ಬೀದಿಗಳಲ್ಲಿ ತಿರುಗಾಡುತ್ತಾ, ಬಸ್ ಸ್ಟಾಂಡ್ ನಲ್ಲಿ ಆಸರೆ ಪಡೆಯುತ್ತಿದ್ದ ಓರ್ವ ಹಿರಿಯ ಮಹಿಳೆಯನ್ನು ಗಮನಿಸಿದ ಸೇವಾಭಾರತಿ ಕಡಬ ಮತ್ತು ಯುವಶಕ್ತಿ (ರಿ) ಕಡೇಶಿವಾಲಯದ ಸದಸ್ಯರು
ಅನಾಮಧೇಯ ಮಾನಸಿಕ ಅಸ್ವಸ್ಥೆಯನ್ನು ಶ್ರೀ ಸಾಯಿ ನಿಕೇತನ ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.


ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ರವರ ಸೂಚನೆಯಂತೆ ಸೇವಾ ಭಾರತಿಯ ಸದಸ್ಯರಾದ ಮಹೇಶ್ ಮತ್ತು ಜಿನಿತ್ ಮರ್ಧಾಳ ಅವರು ಸೇವಾಭಾರತಿ ಬಂಟ್ವಾಳ ವತಿಯಿಂದ ಕಡಬಕ್ಕೆ ನೀಡಿದ ಅಂಬ್ಯುಲೆನ್ಸ್ ನಲ್ಲಿ ಸೇವಾಶ್ರಮಕ್ಕೆ ಕರೆದುಕೊಂಡು ಹೋಗುವ ತಯಾರಿ ನಡೆಸಲಾಯಿತು. ಆ ಬಳಿಕ ಶ್ರುತಿನ್ ಶೆಟ್ಟಿ ಮತ್ತು ಶ್ರೀಕಾಂತ್ ಕನ್ಯಾನ(ಯುವಶಕ್ತಿ ಕಡೇ ಶಿವಾಲಯ) ಇವರ ಮುಖಾಂತರ ಸೇವಾಶ್ರಮದ ಡಾ!ಉದಯ್ ಕುಮಾರ್ ರನ್ನು ಸಂಪರ್ಕಿಸಿ ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ಅಂಬುಲೆನ್ಸ್ ಡ್ರೈವರ್ ಮಹೇಶ್ ಕಡಬ ಮತ್ತು ರಘು (ಠಾಕ್ರೆ) ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.


ಶ್ರೀ ಸಾಯಿನಿಕೇತನ ಸೇವಾಶ್ರಮವು ಮಹಿಳೆಯ ಕಷ್ಟವನ್ನರಿತು ಕೋವಿಡ್ ಪರೀಕ್ಷೆ ನಡೆಸಿ,ನೆಗೆಟಿವ್ ರಿಪೋರ್ಟ್ ಬಂದ ಬಳಿಕ ಆಶ್ರಮಕ್ಕೆ ಸೇರಿಸಿಕೊಳ್ಳಲಾಯಿತು.


ಮಹಿಳೆ ಅತಿಯಾದ ರಕ್ತ ಹೀನತೆಯಿಂದ ಬಳಲುತ್ತಿದ್ದು ಉತ್ತರ ಭಾರತದ ಗ್ರಾಮ್ಯ ಭಾಷೆಯಲ್ಲಿ ಮಾತನಾಡುತ್ತಿದ್ದು, ಮಹಿಳೆಗೆ ಚಿಕಿತ್ಸೆಯ ಜೊತೆಗೆ ಆಶ್ರಮದ ಕೌನ್ಸಿಲರ್ ಗಳ ಆಪ್ತಸಮಾಲೋಚನೆ, ವ್ಯಾಯಾಮ, ಧ್ಯಾನ, ಇತರ ನಿವಾಸಿಗಳ ಸಾಂಗತ್ಯ ನಡೆಸಿ ಶೀಘ್ರ ಗುಣಮುಖರಾಗಿಸುತ್ತೇವೆ ಎಂಬ ಭರವಸೆ ಯೊಂದಿಗೆ, ಸೇವಾ ಕಾರ್ಯಕ್ಕೆ ಕೈಜೋಡಿಸಿದ ಸೇವಾ ಭಾರತಿ ಬಂಟ್ವಾಳ, ಕಡಬ ಪೊಲೀಸ್ ಠಾಣೆ ಹಾಗೂ ಯುವಶಕ್ತಿ ಕಡೇಶಿವಾಲಯದ ಉತ್ತಮ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

Leave A Reply

Your email address will not be published.