ಶಿರ್ವ: ವಿಶ್ವ ಪರಿಸರ ದಿನ ಆಚರಣೆ


ಶಿರ್ವ:ಇಲ್ಲಿನ ಶಿರ್ವ,ಸಂತ ಮೇರಿ ಮಹಾವಿದ್ಯಾಲಯದ ಎನ್‌ಸಿಸಿ ಘಟಕವು ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನುಅವರವರ ಮನೆಯ ಅಂಗಳಗಳಲ್ಲಿ ನೆಡುವ ಮೂಲಕ ಆಚರಿಸಲಾಯಿತು.ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಯುವಕರನ್ನು ಪ್ರೇರೇಪಿಸಿದರು.

 

ಕಾಲೇಜಿನ ಪ್ರಾಂಶುಪಾಲರು ಡಾ!ಹೆರಾಲ್ಡ್ ಐವನ್ ಮೋನಿಸ್ ರವರು ಎಲ್ಲರಿಗೂ ಶುಭಹಾರೈಸಿದರು.ಎನ್‌ಸಿಸಿ ಘಟಕದ ಸಹ ಸಂಯೋಜಕಿ ಯಶೋದ ರವರು,ಸೀನಿಯರ್ ಕ್ಯಾಡೆಟ್ ಅಂಡರ್ ಆಫೀಸರ್ ರಾಮದಾಸ್,ಜೂನಿಯರ್ ಅಂಡರ್ ಆಫೀಸರ್ ಪ್ರವಿತ ಮತ್ತು ರಿಯಾನ್ ರಿಷಿ ಅಲ್ಫೋನ್ಸೋ ಹಾಗೂ ಎಲ್ಲಾ ಕ್ಯಾಡೆಟ್ ಗಳು ಸಹಕರಿಸಿದರು

Leave A Reply

Your email address will not be published.