ಕಾರ್ಕಳ | ಊಟ ಕೇಳಿದರೆಂಬ ಕಾರಣಕ್ಕೆ ತಾಯಿಯ ಮೇಲೆ ಹಲ್ಲೆ ಮಾಡಿದ ಮಗ

ಕಾರ್ಕಳ : ಹಸಿವೆಯಿಂದ ಬಳಲುತ್ತಿದ್ದ ವೃದ್ಧ ತಾಯಿ ಊಟ ಕೇಳಿದರೆಂಬ ಕಾರಣಕ್ಕಾಗಿ ತೆಂಗಿನ ಮರದ ಹೆಡೆಯಿಂದ ತಲೆಗೆ ಹೊಡೆದ ಘಟನೆ ಕಲ್ಯಾ ಕುಂಟಾಡಿ ಅಶೋಕ ನಗರ ಎಂಬಲ್ಲಿ ನಡೆದಿದೆ.

 

ದಾಮೋದರ ಆಚಾರ್ಯ ತನ್ನ ತಾಯಿಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಈತನ ತಾಯಿ ಯಶೋದಾ(83) ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ವಯೋ ಸಹಜವೆಂಬಂತೆ ದುಡಿಯಲು ಅಶಕ್ತರಾಗಿದುದ್ದರಿಂದ ಇವರ ಮಗ ದಾಮೋದರ ಆಚಾರ್ಯ ಕೋಪಗೊಂಡು, ಬೈಯುತ್ತಿರುವುದು ಆತನ ದಿನ ನಿತ್ಯದ ಕೆಲಸವಾಗಿತ್ತು. ತಾಯಿ ಯಶೋದ ಹಸಿವೆಯಾಗುತ್ತಿದೆ ತನಗೆ ಊಟ ನೀಡುವಂತೆ ದಾಮೋದರ ಆಚಾರ್ಯನಲ್ಲಿ ತಿಳಿಸಿದ್ದರು. ಅದರಿಂದ ಕೋಪಗೊಂಡು ನಿನಗೆ ಊಟ ಹಾಕಲು ಸಾಧ್ಯವಿಲ್ಲ ಎಂದು ಬೈದು ತೆಂಗಿನ ಮರದ ಹೆಡೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಆತನ ಹೊಡೆತದ ರಭಸಕ್ಕೆ ತಾಯಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave A Reply

Your email address will not be published.