ಮತ್ತೆ ಜೈಲಿಗೆ ಮರಳುವ ಆಕರ್ಷಣೆ | ಪ್ರಧಾನಿ ಮೋದಿಗೆ ಬೆದರಿಕೆ ಹಾಕಿ ಜೈಲು ಪಾಲಾದ ಜೈಲು ಹಕ್ಕಿ !

ಮತ್ತೆ ಜೈಲಿಗೆ ಹೋಗಬೇಕೆಂಬ ಆಸೆಯಿಂದ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದಾನೆ.

 

ಕೊಲೆ ಬೆದರಿಕೆ ಹಾಕಿದ ವಿಷಯ ತಿಳಿದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸಲ್ಮಾನ್ (22) ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ರಾತ್ರಿ ಕರೆ ಮಾಡಿ ಪ್ರಧಾನಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಈಶಾನ್ಯ ದೆಹಲಿಯ ಖಜೋರಿ ಖಾಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಲ್ಮಾನ್ ವಿರುದ್ಧ ಈಗಾಗಲೇ ಅನೇಕ ಪೊಲೀಸ್ ಪ್ರಕರಣಗಳಿದ್ದು, ಜಾಮೀನಿನ ಮೇಲೆ ಹೊರಗಿದ್ದನೆಂಬುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ. ಜೈಲಿಗೆ ವಾಪಸ್ಸಾಗಲು ಬೆದರಿಕೆ ಕರೆ ಮಾಡಿದ್ದಾಗಿ ಆರೋಪಿ ಪ್ರಾಥಮಿಕ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೈಲಿನ ವಾತಾವರಣ, ಅಲ್ಲಿನ ಇತರ ಖೈದಿಗಳ ಸಾಂಗತ್ಯ ಮತ್ತು ಗೆಳೆತನ ಆತನಿಗೆ ಜೈಲಿನ ಮೇಲೆ ತೀವ್ರ ಆಕರ್ಷಣೆ ಮೂಡಿತ್ತು. ಅದೇ ಕಾರಣದಿಂದ ಆತ ಮತ್ತೆ ಜೈಲಿಗೆ ಹೋಗಬೇಕೆಂದು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದಾನೆ, ಮತ್ತು ಆ ಮೂಲಕ ಜೈಲು ಪಾಲಾಗುತ್ತಿದ್ದಾನೆ.

Leave A Reply

Your email address will not be published.