ಸೈಬರ್ ಕ್ರೈಂ ತಡೆಯಲು ಗೋಲ್ಡನ್ ಹವರ್ ಜಾರಿ | ಮೋಸ ಹೋದ ಒಂದು ಗಂಟೆಯೊಳಗೆ ದೂರು ನೀಡಿದರೆ ಕಳೆದು ಕೊಂಡ ಹಣ ವಾಪಾಸ್ | ವಂಚಕರ ಖಾತೆಗೆ ಹೋಗಬೇಕಿದ್ದ 48 ಕೋಟಿ ರೂಪಾಯಿ ವಾಪಸ್ ಕೊಡಿಸಿದ್ದ ಪೊಲೀಸರು

ಮೋಸದಿಂದ ಸೈಬರ್ ಕ್ರೈಂ ಗೆ ಒಳಗಾಗಿ ಆನ್ಲೈನ್ ವ್ಯವಹಾರದಿಂದ ಮೋಸ ಹೋದವರಿಗೆ ಗೋಲ್ಡನ್ ಹವರ್ ಸಂಜೀವಿನಿಯಾಗಿದೆ.

ಸೈಬರ್​ ಕ್ರೈಂ​ ಇನ್ಸಿಡೆಂಟ್​ ರಿಪೋರ್ಟ್​ ವ್ಯವಸ್ಥೆಯ ಮೂಲಕ ಸೈಬರ್​ ವಂಚಕರ ಖಾತೆಗೆ ಹೋಗಬೇಕಿದ್ದ ಬರೋಬ್ಬರಿ 48 ಕೋಟಿ ರೂಪಾಯಿ ಹಣವನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ.

ಸೈಬರ್ ಕ್ರೈಂ ಕುರಿತು ವಂಚನೆಯ ಒಟ್ಟು 3175 ಪ್ರಕರಣಗಳ ಪೈಕಿ ವಂಚಕರ 1312 ಬ್ಯಾಂಕ್​ ಖಾತೆ ಫ್ರೀಜ್ ಮಾಡಲಾಗಿದೆ.

2020ರ ಡಿಸೆಂಬರ್​ 22ರಂದು ICR ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೋಲ್ಡನ್​ ಹವರ್ ಕಾನ್ಸೆಪ್ಟ್​ ಜಾರಿಗೊಳಿಸಿದ್ದರು.

ಸೈಬರ್​ ವಂಚನೆಯಾದ 1 ಗಂಟೆ ಅವಧಿ ಗೋಲ್ಡನ್​ ಹವರ್ ಆಗಿರಲಿದೆ. ಆ ಅವಧಿಯಲ್ಲಿ 112 ಸಂಖ್ಯೆಯ ಮೂಲಕ ಸೈಬರ್​ ವಂಚನೆ ದೂರು ನೀಡಬೇಕು.

112 ಸಂಖ್ಯೆಗೆ ಕರೆ ಮಾಡಿ ಸೂಕ್ತ ಮಾಹಿತಿ ನೀಡಿದರೆ ಸಾಕು. ಖಾತೆಯಿಂದ ಯಾವುದೇ ಹಣ ವರ್ಗಾವಣೆಯಾಗದಂತೆ ತಡೆ ನೀಡಲಾಗುತ್ತದೆ.

ಈ ಕ್ರಮದಿಂದ ವರ್ಗಾವಣೆಯಾದ ಹಣ ವಂಚಕರ ಖಾತೆಯಿಂದ ವಾಪಸ್ ಮೋಸಕ್ಕೆ ಒಳಗಾದವರ ಖಾತೆಗೆ ಬರುತ್ತದೆ. ಗೋಲ್ಡನ್ ಹವರ್​ ಸದ್ಬಳಕೆ ಮಾಡಿಕೊಂಡರೆ ವಂಚನೆಗೆ ತಡೆ ಒಡ್ಡಬಹುದು. ಇದರಿಂದ ಸೈಬರ್​ ವಂಚನೆಗೊಳಗಾಗುವುದನ್ನು ತಗ್ಗಿಸಲು ಸಾಧ್ಯವಿದೆ.

ಈ ವಿಧಾನದ ಮೂಲಕ ಬರೋಬ್ಬರಿ 48 ಕೋಟಿ ರೂಪಾಯಿಯನ್ನು ವಾಪಸ್ ಪಡೆಯಲಾಗಿದೆ. ಇದರಿಂದ ICR ವ್ಯವಸ್ಥೆ ಪ್ರಾಯೋಗಿಕ ಹಂತದಲ್ಲೇ ಯಶಸ್ಸು ಸಾಧಿಸಿದಂತಾಗಿದೆ.

ಗೋಲ್ಡನ್ ಹವರ್ ವ್ಯವಸ್ಥೆ ಬಳಸುವ ರೀತಿ

– ನಿಮಗೆ ಯಾವುದೇ ರೀತಿಯ ಸೈಬರ್ ವಂಚನೆಯಾದರೆ. ನೀವು ನಿಮ್ಮ ಖಾತೆಯಿಂದ ಅಪರಿಚಿತರಿಗೆ ಹಣ ಕಳುಹಿಸಿದರೆ, ಮೋಸದ ಜಾಲಕ್ಕೆ ಬಿದ್ದರೆ ಕೂಡಲೇ ಎಚ್ಚರವಾಗಿ
– ನಿಮಗೆ ವಂಚನೆಯಾದ ನಂತರದ 1 ಗಂಟೆಯ ಅವಧಿ ಗೋಲ್ಡನ್ ಹವರ್ ಎಂದು ಪರಿಗಣಿಸಲ್ಪಡುತ್ತದೆ
– ಆ ಅವಧಿಯಲ್ಲಿ 112 ಸಂಖ್ಯೆಗೆ ಡಯಲ್ ಮಾಡಿ
– 112 ಸಂಖ್ಯೆಯ ಮೂಲಕ ಸೈಬರ್ ವಂಚನೆಯಾದ ಬಗ್ಗೆ ದೂರು ನೀಡಬೇಕು
– 112 ಸಂಖ್ಯೆಗೆ ಸೂಕ್ತ ಮಾಹಿತಿಗಳನ್ನು ಒದಗಿಸಿದರೆ ಸಾಕು
– ನಿಮ್ಮ ಖಾತೆಯಿಂದ ಯಾವುದೇ ಹಣ ವರ್ಗಾವಣೆ ಆಗದಂತೆ ತಡೆಯಲಾಗುತ್ತದೆ
– ಈ ಕ್ರಮದಿಂದ ವರ್ಗಾವಣೆಯಾದ ಹಣ ವಂಚಕರ ಖಾತೆಯಿಂದ ವಾಪಸ್ ಮೋಸಕ್ಕೆ ಒಳಗಾದವರ ಖಾತೆಗೆ ಬರುತ್ತದೆ

Leave A Reply

Your email address will not be published.